More

    ಭಾರತೀಯ ಮೂಲದ ಗರ್ಲ್​ಫ್ರೆಂಡ್​ನೊಂದಿಗೆ ಆಸಿಸ್​ ಆಲ್​ರೌಂಡರ್​ ಮ್ಯಾಕ್ಸಿ ಎಂಗೇಜ್ಡ್! ​

    ನವದೆಹಲಿ: ಕ್ರಿಕೆಟ್​ ಆಸ್ಟ್ರೇಲಿಯಾದ ಆಲ್​ರೌಂಡರ್​ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ಅವರು ಭಾರತೀಯ ಮೂಲದ ಗರ್ಲ್​ಫ್ರೆಂಡ್​ ವಿನಿ ರಾಮನ್​ರೊಂದಿಗೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಂ ಮೂಲಕ ಬುಧವಾರ ಖಚಿತಪಡಿಸಿದ್ದಾರೆ.

    ತಮ್ಮ ಭಾವಿ ಪತ್ನಿಯೊಂದಿಗೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಫೋಟೋವನ್ನು ಮ್ಯಾಕ್ಸ್​ವೆಲ್ ಇನ್​ಸ್ಟಾಗ್ರಾಂನಲ್ಲಿ ರಿಂಗ್​ ಎಮೋಜಿಯೊಂದಿಗೆ ಪೋಸ್ಟ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ವಿನಿ ರಾಮನ್​ ಮ್ಯಾಕ್ಸ್​ವೆಲ್​ ತೊಡಿಸಿರುವ ರಿಂಗ್​ ಅನ್ನು ಪ್ರದರ್ಶಿಸಿದ್ದಾರೆ.

    ಅಂದಹಾಗೆ ವಿನಿ ರಾಮನ್​ ಕೂಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ಇದೇ ಫೋಟೋವನ್ನು ಪೋಸ್ಟ್​ ಮಾಡಿಕೊಂಡಿದ್ದು, ಕಳೆದ ವಾರ ನನ್ನ ನೆಚ್ಚಿನ ವ್ಯಕ್ತಿ ನನ್ನೊಂದಿಗೆ ಮದುವೆಯಾಗುತ್ತೀಯಾ ಎಂದು ಕೇಳಿದರು. ನಾನು ಒಪ್ಪಿಗೆ ಸೂಚಿಸಿದೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಅಲ್ಲಿಗೆ ಮ್ಯಾಕ್ಸ್​ವೆಲ್​ ಎಂಗೇಜ್​ ಆಗಿರುವುದು ಖಚಿತವಾದಂತಾಯಿತು. ಇನ್ನು ಮದುವೆ ದಿನಾಂಕ ಘೋಷಿಸುವುದೊಂದೆ ಬಾಕಿ ಇದ್ದು, ಅದಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

    ಇನ್ನು ಕ್ರಿಕೆಟ್​ ವಿಚಾರಕ್ಕೆ ಬಂದರೆ ಮ್ಯಾಕ್ಸ್​ವೆಲ್​ ತಮ್ಮ ಎಡ ಮೊಣಕೈನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿರುವುದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೆ ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೆ, ಗಾಯದಿಂದಾಗಿ 6 ರಿಂದ 8 ವಾರಗಳ ಕಾಲ ವಿಶ್ರಾಂತಿಯನ್ನು ಪಡೆಯಬೇಕಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ಫೆ. 12ರಂದು ಖಚಿತಪಡಿಸಿದೆ. ಇನ್ನು ಮುಂದಿನ ಐಪಿಎಲ್​ನಲ್ಲಿ ಪಂಜಾಬ್​ ತಂಡದ ಪರ ಮ್ಯಾಕ್ಸಿ ಕಣಕ್ಕಿಳಿಯಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts