VIDEO| "ಮಾಡರ್ನ್​ ಬಟ್ಟೆ ಧರಿಸಿದವರು..." ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

Kailash BJP
Published on

ಇಂದೋರ್: ಇಂದಿನ ಕಾಲದ ಹುಡುಗಿಯರು ಧರಿಸುವ ಬಟ್ಟೆಗಳನ್ನು ನೋಡಿದರೆ ಅವರನ್ನು ರಾಮಾಯಣದಲ್ಲಿ ಬರುವ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಬಿಜೆಪಿ ಪ್ರದಾನ ಕಾರ್ಯದರ್ಶಿ ಕೈಲಾಶ್​ ವಿಜಯ್​ ವರ್ಗೀಯ ಮಹಿಳೆಯರ ಉಡುಪಿನ ಬಗ್ಗೆ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ಸಂಜೆ ವೇಳೆ ಯುವ ಪೀಳಿಗೆ ಕುಡಿದು ನಶೆಯಲ್ಲಿ ತೇಲಾಡುತ್ತಿರುವುದನ್ನು ನೋಡಿದ ತಕ್ಷಣ ಅವರನ್ನು ಹಿಡಿದು ಬಾರಿಸುವಷ್ಟು ಕೋಪ ಬರುತ್ತದೆ.

ಶೂರ್ಪನಖಿಯಂತೆ ಕಾಣುತ್ತಾರೆ

ನಾವು ಮಹಿಳೆಯರನ್ನು ದೇವತೆ ಎಂದು ಪೂಜಿಸುತ್ತೇವೆ ಅಂತಹವರು ಎಂತಹ ಬಟ್ಟೆಗಳನ್ನು ಧರಿಸುತ್ತಾರೆ ಎಂದರೆ ರಾಮಾಯಣದಲ್ಲಿ ಬರುವ ಶೂರ್ಪನಕಿಯಂತೆ ಕಾಣುತ್ತಾರೆ. ದೇವರು ನಿಮ್ಮಗೆ ಒಳ್ಳೆಯ ದೇಹವನ್ನು ಕೊಟ್ಟಿದ್ಧಾನೆ ಮೈ ತುಂಬಾ ಬಟ್ಟೆ ಹಾಕಿ. ಮನೆಯಲ್ಲಿ ಈ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಹೇಳಿದ್ದಾರೆ.

ಈಗಿನ ಕಾಲದ ಹೆಣ್ಣು ಮಕ್ಕಳು ಧರಿಸುವ ಬಟ್ಟೆಗಳಲ್ಲಿ ಅವರು ರಾಮಾಯಣದ ಶೂರ್ಪನಖಿಯಂತೆ ಕಾಣುತ್ತಾರೆ. ಕಡೆಯಲ್ಲಿ ಶೂರ್ಪನಖಿ ಲಕ್ಷ್ಮಣನನ್ನು ಮೋಹಿಸಲು ಹೋಗಿ ಮೂಗು ಮತ್ತು ಕಿವಿಯನ್ನು ಆತ ಕತ್ತರಿಸುತ್ತಾನೆ ಎಂದು ವಿಡಿಯೋದಲ್ಲಿ ಹೇಳಿರುವುದು ಕಂಡು ಬರುತ್ತದೆ.

ಕಾಂಗ್ರೆಸ್​​ ಖಂಡನೆ

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಬಿಜೆಪಿ ನಾಯಕರು ಪದೇ ಪದೇ ಹೆಣ್ಣು ಮಕ್ಕಳನ್ನು ಅವಮಾನಿಸುತ್ತಿದ್ದಾರೆ. ಇದು ಅವರ ಆಲೋಚನೆ ಹಾಗೂ ಮನೋಭಾವಗಳನ್ನು ಎತ್ತಿ ತೋರಿಸುತ್ತದೆ. ಬಿಜೆಪಿ ನಾಯಕ ಕೈಲಾಶ್​ ಹೆಣ್ಣು ಮಕ್ಕಳನ್ನು ಶೂರ್ಪನಖಿ ಎಂದು ಕರೆದು ಅವರ ಉಡುಗೆ ಬಗ್ಗೆ ಹೇಳಿಕೆ ನೀಡಿರುವುದು ಆಕ್ಷೇಪಾರ್ಹ ಕೂಡಲೇ ಅವರಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net