More

    ಮಹಿಳಾ ಅಥ್ಲೀಟ್ಸ್​ ತರಬೇತಿಗಾಗಿ ‘ಗರ್ಲ್ಸ್ ಫಾರ್​ ಗೋಲ್ಡ್‌‘: 5 ತರಬೇತಿ ಕೇಂದ್ರಗಳಿಗೆ 30 ಕೋಟಿ ರೂ. ಅನುದಾನ

    ಬೆಂಗಳೂರು: ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಕಲೆ, ಸಾಹಿತ್ಯ ಹೀಗೆ ಹತ್ತಾರು ಕ್ಷೇತ್ರಗಳ ಸುಧಾರಣೆಗಾಗಿ ಶ್ರಮಿಸುತ್ತಿರುವ ಇನ್ಫೋಸಿಸ್ ಪ್ರತಿಷ್ಠಾನವು ಈಗ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಕಾಲಿಟ್ಟಿದೆ.

    ಕಾಮನ್‌ವೆಲ್ತ್ ಗೇಮ್ಸ್, ಒಲಿಂಪಿಕ್, ಪ್ಯಾರಾ ಒಲಿಂಪಿಕ್, ಏಷ್ಯನ್ ಗೇಮ್ಸ್‌ಗಳಿಗೆ ಅಥ್ಲೀಟ್‌ಗಳನ್ನು ಅಣಿಗೊಳಿಸಲು ಬೆಂಬಲ ನೀಡುತ್ತಿರುವ ‘ಗೋ ಸ್ಪೋರ್ಟ್ಸ್’ ಪ್ರತಿಷ್ಠಾನದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ದೇಶಾದ್ಯಂತ ಇರುವ ಮಹಿಳಾ ಅಥ್ಲೀಟ್‌ಗಳಿಗಾಗಿ ‘ಗರ್ಲ್ಸ್ ಫಾರ್ ಗೋಲ್ಡ್‌‘ (ಚಿನ್ನಕ್ಕಾಗಿ ಹುಡುಗಿಯರು) ಎಂಬ ಯೋಜನೆ ಆರಂಭಿಸಿದೆ.

    ಇದನ್ನೂ ಓದಿ: ಕಾಂಗ್ರೆಸ್​​ಗೆ 30-40 ಸ್ಥಾನ ಅಂತ ಇತ್ತು, ಈಗ ಅಷ್ಟೂ ಬರಲ್ಲ: ಅಣ್ಣಾಮಲೈ

    ಮಂಗಳವಾರ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ. ಇದು ಶೂಟಿಂಗ್, ಬಾಕ್ಸಿಂಗ್, ವೇಟ್‌ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆ ಬೆಳವಣಿಗೆಗೆ ಕಾರ್ಯನಿರ್ವಹಿಸಲಿದೆ.

    ಇದನ್ನೂ ಓದಿ: ಅಂಬರೀಷ್ ಮೃತಪಟ್ಟಾಗ ರಮ್ಯಾ ಏಕೆ ಬಂದಿರಲಿಲ್ಲ?; ಕಾರಣ ತಿಳಿಸಿದ ನಟಿ

    ಬೆಂಗಳೂರಿನ ಯಾದವ್ ಪ್ರೊ. ಬ್ಯಾಡ್ಮಿಂಟನ್ ಅಕಾಡೆಮಿ, ಮುಂಬೈನ ಲಕ್ಷ್ಯ ಶೂಟಿಂಗ್ ಕ್ಲಬ್, ಖ್ಯಾತ ಮಹಿಳಾ ಬಾಕ್ಸಿಂಗ್‌ಪಟು ಮೇರಿ ಕೋಮ್ ನೇತೃತ್ವದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ‘ಮೇರಿ ಕೋಮ್ ಪ್ರಾದೇಶಿಕ ಬಾಕ್ಸಿಂಗ್ ಫೆಡರೇಷನ್’, ತಮಿಳುನಾಡಿನ ರಾಮನ್ ಟಿಟಿ ಹೈಪರ್ಫಾರ್ಮೆನ್ಸ್ ಕೇಂದ್ರ ಹಾಗೂ ಸತೀಶ್ ಶಿವಲಿಂಗಮ್ ವೇಟ್ ಲಿಫ್ಟಿಂಗ್ ಪ್ರತಿಷ್ಠಾನದಲ್ಲಿ ಅಥ್ಲೀಟ್‌ಗಳಿಗೆ ತರಬೇತಿ ನೀಡಲಿದೆ.

    ಇದನ್ನೂ ಓದಿ: ಹಾವುಗಳ ರಾಶಿ: ಇಬ್ಬರಿಗೆ ಕಡಿತ, ಕಂಗಾಲಾದ ಕಾರ್ಮಿಕರು!

    30 ಕೋಟಿ ರೂ ವೆಚ್ಚ: ಉತ್ತಮ ಸಾಧನೆ ತೋರುವ ಅಥ್ಲೀಟ್‌ಗಳು, ತರಬೇತುದಾರರು ಮತ್ತು ಅಕಾಡೆಮಿಗಳಿಗೆ ನೆರವು ನೀಡುವುದಕ್ಕಾಗಿ 30 ಕೋಟಿ ರೂ. ವಿನಿಯೋಗಿಸುತ್ತಿದೆ. ಈ ಯೋಜನೆಯಡಿ 13ರಿಂದ 19 ವಯಸ್ಸಿನ ಅಥ್ಲೀಟ್‌ಗಳನ್ನು ಗುರುತಿಸಿ ಹೆಚ್ಚಿನ ಸಾಮರ್ಥ್ಯವಿರುವ ಅಕಾಡೆಮಿಗಳು ಮತ್ತು ತರಬೇತುದಾರರ ಜತೆ ಒಪ್ಪಂದ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ವೆರವು ನೀಡಲಿದೆ. ವಿದ್ಯಾರ್ಥಿ ವೇತನ, ತರಬೇತಿ ನೀಡುವುದು ಮತ್ತು ಅಕಾಡೆಮಿಯ ಸೌಲಭ್ಯಗಳನ್ನು ಒದಗಿಸಲಿದೆ.

    ಮಹಿಳಾ ಅಥ್ಲೀಟ್ಸ್​ ತರಬೇತಿಗಾಗಿ ‘ಗರ್ಲ್ಸ್ ಫಾರ್​ ಗೋಲ್ಡ್‌‘: 5 ತರಬೇತಿ ಕೇಂದ್ರಗಳಿಗೆ 30 ಕೋಟಿ ರೂ. ಅನುದಾನ

    ದೇಶಕ್ಕೆ ಎನಾದರೂ ಕೊಡುಗೆ ನೀಡಬೇಕೆಂಬ ಛಲ ಮತ್ತು ಧ್ಯೇಯ ನನ್ನನ್ನು ಸಾಧನೆ ಮಾಡುವಂತೆ ಮಾಡಿತು. ನನ್ನನ್ನು ನಾನು ಸಾಬೀತು ಮಾಡಿಕೊಳ್ಳಲು ಮತ್ತು ನಾನೊಬ್ಬ ಮಹಿಳೆಯಾಗಿ, ಗೃಹಿಣಿಯಾಗಿ ಮತ್ತು ತಾಯಿಯಾಗಿ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತಿದ್ದರ ಪರಿಣಾಮವಾಗಿ ಉನ್ನತ ಸಾಧನೆ ಸಾಧ್ಯವಾಯಿತು.
    | ಮೇರಿ ಕೋಮ್, ಹೆಸರಾಂತ ಬಾಕ್ಸರ್

    ಈ ವೇಳೆ ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಜೀವನದಲ್ಲಿ ಸಾಧನೆ ಎಂಬುದು ತಪಸ್ಸಿದ್ದಂತೆ. ತಮ್ಮ ಗುರಿಯನ್ನು ಮುಟ್ಟಲು ಕಠಿಣ ಪರಿಶ್ರಮ ಮುಖ್ಯ. ವಿಭಿನ್ನ ವ್ಯಕ್ತಿಯಾಗಿ ಬೆಳೆಯಲು ಉತ್ತಮ ಗುರು, ಸರಿಯಾದ ದಾರಿ ಮತ್ತು ಶಾಂತ ಮನಸ್ಸಿನಿಂದ ಸಾಧ್ಯ ಎಂದು ಹೇಳಿದರು.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ದಿಟ್ಟ ನಿರ್ಧಾರಗಳು ನಿಮ್ಮ ಭವಿಷ್ಯವನ್ನ ಬದಲಾಯಿಸಲಿವೆ. ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಟ್ರಸ್ಟಿ ಸುಮಿತ್ ವಿರ್ಮಾನಿ, ಗೋ ಸ್ಫೋರ್ಟ್ಸ್ ಸಿಇಒ ದೀಪ್ತಿ ಬೋಪಯ್ಯ ಸೇರಿ ಪ್ರತಿಷ್ಠಾನದ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts