ಲೋಕಲ್ ರೈಲಿನಲ್ಲಿ ಹುಡುಗಿ ಅಸಭ್ಯ ನೃತ್ಯ: ವೀಡಿಯೊ ವೈರಲ್..ಮುಂದೆ ಆಗಿದ್ದೇನು?

girl
Published on

ಮುಂಬೈ: ಲೋಕಲ್ ರೈಲಿನಲ್ಲಿ ಹುಡುಗಿಯೊಬ್ಬಳು ಟ್ವಿರ್ಕಿಂಗ್ ಮತ್ತು ಅಸಭ್ಯ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ.

ರೈಲಿನಲ್ಲಿ ಸಾರ್ವಜನಿಕರ ಎದುರು 'ಸೈಯಾ ಮೇರೆ ಸತಾ ಸತ್.'ಭೋಜ್‌ಪುರಿ ಹಾಡಿಗೆ ಅಂಗಾಂಗ ಪ್ರದರ್ಶಿಸುತ್ತ ನೃತ್ಯ ಮಾಡಿದ್ದಾಳೆ. ಈ ಅಶ್ಲೀಲ ನೃತ್ಯವನ್ನು ಆಕೆ ಪ್ರದರ್ಶಿಸಿರುವುದು ಪ್ರಯಾಣಿಕರ ಗಮನವನ್ನು ಸೆಳೆಯಲು ಎನ್ನಲಾಗುತ್ತಿದ್ದು, ವಿಡಿಯೋ ಮಾಡಿದ ಬಳಿಕ ಅಲ್ಲಿಂದ ಮುಂದಕ್ಕೆ ಹೋಗಿದ್ದಾಳೆ.

ವೀಡಿಯೊ ಯಾವುದರ ಬಗ್ಗೆ?:  ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ರೀಲ್ ದಾಖಲಾಗಿತ್ತು. ಕಡು ಕಪ್ಪು ಉಡುಪನ್ನು ಧರಿಸಿದ ಹುಡುಗಿ ಯಾವುದೇ ಹಿಂಜರಿಕೆಯಿಲ್ಲದೆ ಮೊಬೈಲ್​ ಕ್ಯಾಮೆರಾದ ಮುಂದೆ ಕುಣಿದಿದ್ದಾಳೆ. ಸಹ ಪ್ರಯಾಣಿಕರು ಉಚಿತ ಮನರಂಜನೆ ತೆಗೆದುಕೊಂಡರಲ್ಲದೆ ಇದನ್ನು ಚಿತ್ರೀಕರಿಸುವ ಬಗ್ಗೆ ಕಾಳಜಿ ವಹಿಸಿದ್ದಾರೆ. ಪ್ರಯಾಣಿಕರಲ್ಲಿ ಕೆಲವರು ಸಮ್ಮತಿಸಿದರೆ, ಇನ್ನು ಕೆಲವರು ತಮ್ಮ ಮುಖಗಳನ್ನು ಬ್ಯಾಗ್‌ಗಳಿಂದ ಮುಚ್ಚಿಕೊಂಡಿದ್ದಾರೆ.

ಅದೇ ರೀತಿ, ಈ ನರ್ತಕಿಯ ಮತ್ತೊಂದು ವೀಡಿಯೊ ನೆಟಿಜನ್‌ಗಳ ಗಮನವನ್ನು ಸೆಳೆದಿದೆ. ಕೆಲವರು ಈಕೆ ಮಾಡಿದ ನೃತ್ಯವನ್ನು ಖಂಡಿಸಿದರೆ, ಕೆಲವರು ಇತರ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅದರಲ್ಲೂ ಚಾಲನೆಯಲ್ಲಿರುವ ರೈಲಿನಲ್ಲಿ ಇದನ್ನು ಅನುಮತಿಸಬಾರದು ಎಂದು ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯಂತೆ ಮುನ್ನುಗ್ಗುತ್ತಿರುವ ಡ್ಯಾನ್ಸ್ ರೀಲ್ ಅನ್ನು ಗಮನಿಸಿ, ರೈಲ್ವೇ ಅಧಿಕಾರಿಗಳು 'X'(ಎಕ್ಸ್) ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿಸದ್ದು, ವಿಷಯವನ್ನು ಗಣನೆಗೆ ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮುಂಬೈ ರೈಲ್ವೇ ಪೊಲೀಸ್ ಕಮಿಷನರೇಟ್ ಘಟನೆಯ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಭದ್ರತಾ ವಿಭಾಗಕ್ಕೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net