More

    ಸ್ಕೂಲ್​ಬ್ಯಾಗ್​ನಿಂದ ಬಂದೂಕು ಹೊರಗೆಳೆದಳು, ಮೂವರ ಮೇಲೆ ಗುಂಡು ಹಾರಿಸಿದಳು !

    ಇಡಾಹೋ : ಅಮೆರಿಕದ ಶಾಲೆಯೊಂದರಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯು ಸ್ಕೂಲ್​ ಬ್ಯಾಗ್​ನಿಂದ ದಿಢೀರನೇ ಬಂದೂಕು ತೆಗೆದು ಶೂಟ್​ಔಟ್​ ನಡೆಸಿದ ಘಟನೆ ನಡೆದಿದೆ. ಇಡಾಹೋ ಪ್ರಾಂತ್ಯದಲ್ಲಿ ನಿನ್ನೆ ನಡೆದ ಈ ಘಟನೆಯಲ್ಲಿ ಎರಡು ವಿದ್ಯಾರ್ಥಿಗಳು ಮತ್ತು ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಇಡಾಹೋ ಜಲಪಾತದ ಬಳಿಯಿರುವ ರಿಗ್ಬಿ ಮಿಡಲ್ ಸ್ಕೂಲ್​ನ ಆರನೇ ತರಗತಿಯ ವಿದ್ಯಾರ್ಥಿನಿಯು, ತನ್ನ ಬ್ಯಾಕ್​​ಪ್ಯಾಕ್​ನಿಂದ ಒಂದು ಹ್ಯಾಂಡ್​ಗನ್​ಅನ್ನು ಹೊರತೆಗೆದಳು. ನಂತರ ಶಾಲೆಯ ಒಳಭಾಗದಲ್ಲಿ ಮತ್ತು ಆವರಣದಲ್ಲಿ ಹಲವು ರೌಂಡ್​ ಗುಂಡು ಹಾರಿಸಿದಳು. ಸಾಹಸ ತೋರಿದ ಶಿಕ್ಷಕರೊಬ್ಬರು ಆಕೆಯಿಂದ ಬಂದೂಕು ಕಿತ್ತುಕೊಂಡು ಆಕೆಯನ್ನು ಹಿಡಿದಿಟ್ಟರು. ನಂತರ ಪೊಲೀಸರು ಬಂದು ಆಕೆಯನ್ನು ವಶಕ್ಕೆ ಪಡೆದರು ಎಂದು ಜೆಫರ್​​ಸನ್​ ಕೌಂಟಿ ಶೆರೀಫ್​ ಆದ ಸ್ಟೀವ್ ಆ್ಯಂಡರ್​ಸನ್ ಹೇಳಿದ್ದಾರೆ.

    ಇದನ್ನೂ ಓದಿ: ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನಗೂ ಬೆಂಕಿ ಇಡಿ… ಎಂದ ಪತಿ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

    ಈ ಶೂಟ್​ಔಟ್​ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮತ್ತು ಒಬ್ಬ ಸಿಬ್ಬಂದಿಗೆ ಗುಂಡೇಟು ಬಿದ್ದಿದೆ. ಆದರೆ ಯಾರ ಜೀವಕ್ಕೂ ಅಪಾಯವಾಗಿಲ್ಲ ಎನ್ನಲಾಗಿದೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಎಫ್​ಬಿಐ ತನಿಖೆ ಆರಂಭಿಸಿದೆ.

    ಅಮೆರಿಕದಲ್ಲಿ ಇತ್ತೀಚಿನ ವಾರಗಳಲ್ಲಿ ಹಲವು ಶೂಟಿಂಗ್​ ಪ್ರಸಂಗಗಳು ವರದಿಯಾಗಿವೆ. ಬಂದೂಕಿನ ಹಿಂಸಾಚಾರವನ್ನು ಅಧ್ಯಕ್ಷ ಜೋ ಬಿಡೆನ್​ ಅವರು ಕಳೆದ ತಿಂಗಳು ಸಾಂಕ್ರಾಮಿಕ ಎಂದು ಕರೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ಹೇಳಿದ್ದರು. ಕಳೆದ ವರ್ಷ ಅಮೆರಿಕದಲ್ಲಿ ಆತ್ಮಹತ್ಯೆಗಳೂ ಸೇರಿದಂತೆ 43,000 ಸಾವುಗಳು ಬಂದೂಕಿನಿಂದ ಉಂಟಾಗಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಕಾರಿನಲ್ಲೇ ಕೂತು ಲಸಿಕೆ ಪಡೆಯಿರಿ ! ಪ್ರತಿ ವಲಯದಲ್ಲೂ ಡ್ರೈವ್​ಇನ್ ಲಸಿಕಾ ಕೇಂದ್ರಗಳ ಸ್ಥಾಪನೆ

    ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ : ಯಾವುದಕ್ಕೆ ಎಷ್ಟು ದುಡ್ಡು… ವಿವರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts