More

    ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ : ಯಾವುದಕ್ಕೆ ಎಷ್ಟು ದುಡ್ಡು… ವಿವರ ಇಲ್ಲಿದೆ

    ಬೆಂಗಳೂರು : ಕರ್ನಾಟಕದಲ್ಲಿ ಸರ್ಕಾರದ ಶಿಫಾರಸ್ಸಿನ ಮೇರೆಗೆ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕರೊನಾ ರೋಗಿಗಳಿಗೆ ಚಿಕಿತ್ಸೆಯ ಪ್ಯಾಕೇಜ್​ ದರವನ್ನು ರಾಜ್ಯ ಸರ್ಕಾರ ಇಂದು ಪರಿಷ್ಕರಿಸಿದೆ. ಸೋಂಕಿತರ ಚಿಕಿತ್ಸೆಗಾಗಿ ಪಿಪಿಇ ಮತ್ತು ಪರಿಕರಗಳನ್ನೊಳಗೊಂಡಂತೆ ದಿನವೊಂದಕ್ಕೆ ಪಡೆಯಬಹುದಾದ ಪರಿಷ್ಕೃತ ಪ್ಯಾಕೇಜ್ ದರವನ್ನು ನಿಗದಿಪಡಿಸಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

    1) ಜನರಲ್ ವಾರ್ಡ್​ – 5,200 ರೂ.
    2) ಎಚ್​ಡಿಯು – 8,000 ರೂ.
    3) ಐಸೊಲೇಷನ್ ಐಸಿಯು ವೆಂಟಿಲೇಟರ್​ ರಹಿತ – 9750 ರೂ.
    4) ಐಸೊಲೇಷನ್ ಐಸಿಯು ವೆಂಟಿಲೇಟರ್​ ಸಹಿತ – 11,500 ರೂ.

    ಇದನ್ನೂ ಓದಿ: ರಾಜ್ಯದಲ್ಲಿ 2ನೇ ಡೋಸ್ ನೀಡಲು ವ್ಯಾಕ್ಸಿನ್ ಕೊರತೆ : 3 ದಿನಗಳಲ್ಲಿ ಕ್ರಮ ಕೈಗೊಳ್ಳಲು ಹೈಕೋರ್ಟ್​ ನಿರ್ದೇಶನ

    ಮೇ 1 ರಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಮಾನವ ಸಂಪನ್ಮೂಲ ಮತ್ತು ವೈದ್ಯಕೀಯ ಪರಿಕರಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಚಿಕಿತ್ಸೆಯ ಪ್ಯಾಕೇಜ್​ ದರವನ್ನು ಹೆಚ್ಚಿಸಲು ಕೋರಿದ್ದರು. ಈ ನಿಟ್ಟಿನಲ್ಲಿ ಸರ್ಕಾರದ ತಾಂತ್ರಿಕ ಸಮಿತಿ ಮತ್ತು ಆರೋಗ್ಯ ಇಲಾಖೆ ನಿರ್ದೇಶಕರು ಪರಿಶೀಲನೆ ನಡೆಸಿ, ದರ ಪರಿಷ್ಕರಣೆಗೆ ಸಲಹೆ ನೀಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಆರೋಗ್ಯ ಪ್ರಾಧಿಕಾರದಿಂದ ಸೂಚಿತವಾಗಿ ದಾಖಲಾಗುವ ಕರೊನಾ ರೋಗಿಗಳಿಗೆ ಪರಿಷ್ಕೃತ ದರಪಟ್ಟಿಯ ಪ್ರಕಾರ ಮಾತ್ರ ಹಣ ಪಡೆಯಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿ ಕೆಳಗೆ ಶಿಕ್ಷೆಗೆ ಅರ್ಹರಾಗುತ್ತಾರೆ ಎಂದು ತಾಕೀತು ಮಾಡಲಾಗಿದೆ.

    ಮಾಜಿ ಸಚಿವ, ಲೋಕ ದಳ ನಾಯಕ ಅಜಿತ್​ ಸಿಂಗ್ ಕರೊನಾದಿಂದ ನಿಧನ

    VIDEO | ಕೇಂದ್ರ ಸಚಿವರ ವಾಹನದ ಮೇಲೆ ‘ಟಿಎಂಸಿ ಗೂಂಡಾ’ಗಳಿಂದ ಅಟ್ಯಾಕ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts