ಬೆಂಗಳೂರು: ಖಾಸಗಿ ಆಸ್ಪತ್ರೆಗಳಿಗೆ ಹೋಟೆಲ್‌ಗಳ ಸಹಯೋಗದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲು ಕೆಪಿಎಂಇ ಕಾಯ್ದೆಯಡಿ ಅವಕಾಶ ಕಲ್ಪಿಸಿ ಸರ್ಕಾರ, ಸೇವಾ ಸೌಲಭ್ಯಗಳಿಗೆ ಗರಿಷ್ಠ ಶುಲ್ಕವನ್ನು ನಿಗದಿಪಡಿಸಿ ಸುತ್ತೋಲೆ ಹೊರಡಿಸಿದೆ.
ಸಾಮಾನ್ಯ ಹೋಟೆಲ್‌ಗಳಲ್ಲಿ ದಿನವೊಂದಕ್ಕೆ ಗರಿಷ್ಠ 4 ಸಾವಿರ ರೂಪಾಯಿ, 3 ಸ್ಟಾರ್ ಹೋಟೆಲ್‌ಗಳಿಗೆ ಗರಿಷ್ಠ 8 ಸಾವಿರ ರೂ. ಹಾಗೂ ಪಂಚತಾರಾ ಹೋಟೆಲ್‌ಗಳಿಗೆ ಗರಿಷ್ಠ 10 ಸಾವಿರ ರೂ. ನಿಗದಿಪಡಿಸಲಾಗಿದೆ.
ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಹೋಟೆಲ್‌ಗಳ ದರ್ಜೆಯ ಅನುಸಾರ ದರ ನಿಗದಿ ಮಾಡಲಾಗಿದೆ. ಸೋಂಕಿನ ಸೌಮ್ಯ ಹಾಗೂ ಮಧ್ಯಮ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡವರಿಗೆ ಚಿಕಿತ್ಸೆಯನ್ನು ಒದಗಿಸಬಹುದಾಗಿದೆ. ಅಲ್ಲಿ ದಾಖಲಿಸಿಕೊಂಡವರ ಮಾಹಿತಿಯನ್ನು ಆರೋಗ್ಯ ಇಲಾಖೆ ಅಥವಾ ಬಿಬಿಬಿಎಂಪಿ ಅಧಿಕಾರಿಗಳಿಗೆ ಪ್ರತಿನಿತ್ಯ ಒದಗಿಸಬೇಕು ಎಂದು ಸೂಚಿಸಲಾಗಿದೆ.
ಕೋವಿಡ್ ಆರೈಕೆ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತರಬೇತಿ ಹೊಂದಿದ ಸಿಬ್ಬಂದಿಯನ್ನು ಆರೈಕೆಗೆ ನೇಮಿಸಬೇಕು. ಕಾಲ ಕಾಲಕ್ಕೆ ಸೋಂಕಿತರ ಆರೋಗ್ಯದ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿರಬೇಕು. ದಿನದ ಎಲ್ಲ ಅವಧಿಯಲ್ಲಿಯೂ ಆಂಬುಲೆನ್ಸ್ ಲಭ್ಯವಿರಬೇಕು. ಸೋಂಕಿತ ವ್ಯಕ್ತಿ ಚೇತರಿಸಿಕೊಂಡ ಬಳಿಕ ಸರ್ಕಾರದ ಮಾರ್ಗಸೂಚಿಯನ್ವಯ ಮನೆಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.
ಎರಡು ಕೋಟಿ ಜನರಿಗೆ ಲಾಕ್: ಚೀನಾದಲ್ಲಿ ಲಾಕ್ಡೌನ್ ನಗರಗಳ ಸಂಖ್ಯೆ ಮೂರಕ್ಕೆ ಏರಿಕೆ
ವಿಚ್ಛೇದನವಾದ ಕೇವಲ 3 ತಿಂಗಳಿಗೆ ಹೊಸ ಲವ್ ಸ್ಟೋರಿ ಆರಂಭಿಸಿದ ಸಮಂತಾ ಮಾಜಿ ಪತಿ ನಾಗಚೈತನ್ಯ… ವಿಡಿಯೋ ವೈರಲ್!