VIDEO | ಶಿಕ್ಷಣಾಧಿಕಾರಿ ವಿರುದ್ಧ ಪ್ರತಿಭಟನೆ; ಕಾರನ್ನು ಧ್ವಂಸಗೊಳಿಸಿದ ವಿದ್ಯಾರ್ಥಿನಿಯರು!

Untitled design - 2023-09-12T172158.765
Published on

ವೈಶಾಲಿ: ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಶಿಕ್ಷಣ ಇಲಾಖೆ ಅಧಿಕಾರಿಯ ವಾಹನವನ್ನು ಧ್ವಂಸಗೊಳಿಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ವರದಿಯಾಗಿದೆ.

ವರದಿ ಪ್ರಕಾರ, ಶಾಲೆಯಲ್ಲಿ ಪೀಠೋಪಕರಣಗಳು ಮತ್ತು ಇತರ ಮೂಲಭೂತ ಸೌಕರ್ಯಗಳಂತಹ ಸೌಲಭ್ಯಗಳ ಕೊರತೆಯಿಂದ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿನಿಯರು, ಶಿಕ್ಷಣ ಅಧಿಕಾರಿಯ ಭೇಟಿಗಾಗಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಶಾಲೆಯ ಆಡಳಿತವು ವಿದ್ಯಾರ್ಥಿನಿಯರ ತಡೆಯಲು ನಡೆಸಿದ ಯತ್ನ ವಿಫಲಗೊಂಡಿದೆ. ಶಾಲೆಯಲ್ಲಿ ಸರಿಯಾದ ಬೆಂಚು, ಕುರ್ಚಿ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ ಎಂದು ಆರೋಪಿಸಿ, ಶಿಕ್ಷಣಾಧಿಕಾರಿಯ ಕಾರನ್ನು ಕಲ್ಲಿನಿಂದ ಮತ್ತು ಇತರ ವಸ್ತುಗಳಿಂದ ಧ್ವಂಸಗೊಳಿಸಿದ್ದಾರೆ. ಘಟನೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಮಹಿಳಾ ಪೊಲೀಸರು ಶಾಲೆಗೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net