

ಅಮೆರಿಕಾ: ಶಾಪಿಂಗ್ ಮಾಲ್ನಲ್ಲಿ ಎಸ್ಕಲೇಟರ್ನಲ್ಲಿ ಹೋಗುತ್ತಿದ್ದ ಯುವಕನೊಬ್ಬನಿಂದ ಸ್ಮಾರ್ಟ್ಫೋನ್ ಕಸಿದುಕೊಂಡ ಯುವತಿಯರಿಗೆ ಮುಂದೇನಾಯ್ತು ಎಂಬ ಸಂಗತಿ ವಿಡಿಯೋ ನೋಡಿದ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಈ ಘಟನೆಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಶಾಪಿಂಗ್ ಮಾಲ್ಗೆ ತೆರಳಿದ್ದ ಯುವಕನೊಬ್ಬ ಕೆಳ ಮಹಡಿಯಿಂದ ಮೇಲಿನ ಮಹಡಿಗೆ ಎಸ್ಕಲೇಟರ್ ಸಹಾಯದಿಂದ ಬರುತ್ತಿದ್ದ. ಈ ವೇಳೆ ಕೆಳಗಿನ ಫ್ಲೋರ್ಗೆ ಹಿಂದಿರುಗುತ್ತಿದ್ದ ಯುವತಿಯರು, ಆತ ಕೈಯಲ್ಲಿ ಹಿಡಿದಿದ್ದ ಸ್ಮಾರ್ಟ್ಫೋನ್ ಅನ್ನು ಕಸಿದುಕೊಂಡಿದ್ದಾರೆ.
ಮೊಬೈಲ್ ಕಿತ್ತುಕೊಂಡ ಖುಷಿಯಲ್ಲಿದ್ದ ಯುವತಿಯರಿಗೆ ಶಾಕ್ ನೀಡಿದ ಯುವಕ, ಶರವೇಗದಲ್ಲಿ ಅವರು ವಿಡಿಯೋ ಮಾಡುತ್ತಿದ್ದ ಸ್ಮಾರ್ಟ್ಫೋನ್ ಅನ್ನು ಕಸಿದಿದ್ದಾರೆ. ಈ ದೃಶ್ಯ ನೋಡುಗರನ್ನು ಒಮ್ಮೆ ಅಚ್ಚರಿಗೊಳಿಸಿದೆ.