ಬಾಹುಬಲಿ ದಾಖಲೆಯನ್ನು ಉಡೀಸ್​ ಮಾಡಲಿದೆ 'ಜೈಲರ್'​!; 20ನೇ ದಿನಕ್ಕೆ 'ತಲೈವಾ' ಚಿತ್ರ ಗಳಿಸಿದ್ದೆಷ್ಟು?

Untitled design - 2023-08-29T180100.862
Published on

ಮುಂಬೈ: ನೆಲ್ಸನ್ ದಿಲೀಪ್​ಕುಮಾರ್​ ನಿರ್ದೇಶನದ, ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯ 'ಜೈಲರ್'​ ಚಿತ್ರವು ಬಿಡುಗಡೆಗೊಂಡ ಮೊದಲ ದಿನದಿಂದಲೂ ಹಲವು ದಾಖಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಈ ಹಿಂದಿನ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಬರೆದ ರೆಕಾರ್ಡ್​ಗಳನ್ನು ಮುರಿಯುವಲ್ಲಿ ತಲೈವಾ ಚಿತ್ರ ಮುಂದಿದ್ದು, 650 ಕೋಟಿ ರೂ. ಕ್ಲಬ್​ ಸೇರುವ ಮೂಲಕ ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಆಗಸ್ಟ್​ 10 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆದ​ ಆಕ್ಷನ್-ಥ್ರಿಲ್ಲರ್ ಜಾನರ್​ನ 'ಜೈಲರ್' ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ದಾಖಲೆಗಳನ್ನು ಬರೆಯಿತು. ಸದ್ಯ ಈ ಚಿತ್ರವು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಬ್ಲಾಕ್‌ಬಸ್ಟರ್ 'ಬಾಹುಬಲಿ 1' ಚಿತ್ರ ಗಳಿಸಿದ್ದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್​ ಅನ್ನು ಮುರಿಯುವಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಜೈಲರ್​ 650 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ.

ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರ ಒಟ್ಟು 450.80 ಕೋಟಿ ರೂ. ಗಳಿಸಿದ ಜೈಲರ್​, ಎರಡನೇ ವಾರದಲ್ಲಿ 124.18 ಕೋಟಿ ರೂ.ಗಳನ್ನು ಗಳಿಸಿತು.

ವಾರ 1: 450.80 ಕೋಟಿ ರೂ.

ವಾರ 2: 124.18 ಕೋಟಿ

ವಾರ 3, ದಿನ 1: 7.67 ಕೋಟಿ ರೂ.

ದಿನ 2: 6.03 ಕೋಟಿ ರೂ.

ದಿನ 3: 8.36 ಕೋಟಿ ರೂ.

ದಿನ 4: 10.25 ಕೋಟಿ ರೂ.

5 ನೇ ದಿನ: 5.12 ಕೋಟಿ ರೂ.

ಒಟ್ಟು 612.41 ಕೋಟಿ ರೂ. ಗಳಿಕೆ ಕಾಣುವ ಮುಖೇನ ಇದೀಗ 650 ಕೋಟಿ ರೂ. ಕ್ಲಬ್​ನತ್ತ ಮುನ್ನುಗ್ಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net