

ವೈರಲ್ ವಿಡಿಯೋದಲ್ಲಿ ತಂದೆ ತಮ್ಮ ಮಕ್ಕಳನ್ನು ಪ್ರೀತಿಸುವುದಲ್ಲದೆ, ಅವರನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಡಲು ಹಿಂಜರಿಯುವುದಿಲ್ಲ ಎಂಬುವುದನ್ನು ತಿಳಿಯಬಹುದು.
Viral vedeo: ಒಬ್ಬ ತಂದೆ ತನ್ನ ಮಕ್ಕಳಿಗಾಗಿ ತಾನು ಎಷ್ಟಾದರೂ ನೋವನ್ನು ಅನುಭವಿಸಲು ಸಿದ್ಧನಿರುತ್ತಾನೆ ಎಂಬುವುದಕ್ಕೆ ಹಲವಾರು ಉದಾಹರಣೆಗಳುಂಟು. ಅಂದಹಾಗೆ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮಗಳ ರಕ್ಷಣೆಗೆ ಮುಂದಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹೃದಯ ವಿದ್ರಾವಕ ವಿಡಿಯೋದಲ್ಲಿ, ಪ್ಲಾಟ್‌ಫಾರ್ಮ್‌ನಲ್ಲಿದ್ದ ಹುಡುಗಿಯೊಬ್ಬಳು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಖಾಲಿ ಜಾಗದಲ್ಲಿ ಇದ್ದಕ್ಕಿದ್ದಂತೆ ಬಿದ್ದುಬಿಡುತ್ತಾಳೆ. ಅದೇ ಸಮಯದಲ್ಲಿ ನಿಲ್ದಾಣಕ್ಕೆ ಅತೀ ವೇಗದಲ್ಲಿ ರೈಲು ಬಂದಿದೆ. ಇದನ್ನು ನೋಡಿ ಅಲ್ಲಿದ್ದ ಜನರು ಆತಂಕಗೊಂಡು ಏನು ಮಾಡಬೇಕೆಂದು ತಿಳಿಯದೇ ಸುತ್ತಲೂ ಕಿರುಚಿದ್ದಾರೆ. ಅಷ್ಟರಲ್ಲಿ ಆಕೆಯ ತಂದೆ ಏನೂ ಯೋಚಿಸದೆ ಹಳಿಯ ಮೇಲೆ ಹಾರಿ ತನ್ನ ಮಗಳನ್ನು ಅಪ್ಪಿಕೊಂಡು, ಹಳಿಯ ಮೇಲೆಯೇ ಮಲಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ರೈಲು ಅವರಿಬ್ಬರ ಮೇಲೆ ಹಾದುಹೋಗಿದೆ.
(ಏಜೆನ್ಸೀಸ್)
ಈ ಸಂಪೂರ್ಣ ಘಟನೆಯನ್ನು ನಿಲ್ದಾಣದಲ್ಲಿದ್ದ ಒಬ್ಬ ಪ್ರಯಾಣಿಕ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದಾನೆ. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಅಪ್ಪನ ಪ್ರೀತಿ ಅದ್ಭುತ ಎಂದು ಕಮೆಂಟ್ ಮಾಡಿದ್ದಾರೆ.
ಇಡೀ ರೈಲು ಅವರ ಮೇಲೆ ಹಾದುಹೋಗಿದೆ ಮತ್ತು ದೇವರ ದಯೆ ಎಷ್ಟಿತ್ತೆಂದರೆ ಅವರಲ್ಲಿ ಯಾರಿಗೂ ಒಂದು ಸಣ್ಣ ಗಾಯವೂ ಸಹ ಆಗಿಲ್ಲ. ರೈಲು ಹಾದುಹೋದ ಬಳಿಕ, ತಂದೆ ಮತ್ತು ಮಗಳು ಇಬ್ಬರೂ ಹಳಿಯಿಂದ ಎದ್ದಾಗ, ಅಲ್ಲಿದ್ದ ಎಲ್ಲರೂ ಆ ದೃಶ್ಯವನ್ನು ನೋಡಿ ಭಾವುಕರಾಗಿದ್ದಾರೆ.