ಕಡಿಮೆ ಅಂಕ ಬಂದಿದೆ ಎಂದ ತಂದೆ: 600ಕ್ಕೆ 560 ಅಂಕ ಬಂದಿದೆ ಅಪ್ಪಾ... ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ! | Suicide

dk - 2025-05-29T191233.961
Published on

Suicide: ಶಿಕ್ಷಣವೂ ಉದ್ಯೋಗ ಪಡೆಯುವುದಕ್ಕೆ ಮಾತ್ರ ಸಾಧನವಲ್ಲ. ಅದು ಮನುಷ್ಯ ಜೀವನದ ವಿಕಸನ ಮತ್ತು ಜೀವನದ ಗುರಿಯನ್ನು ಹುಡುಕಿ ಆತ್ಮತೃಪ್ತಿ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳುವ ಸತ್ಯ. ಆದರೆ ಇಂದಿನ ಜನಾಂಗದ ಯುವಕ-ಯುವತಿ ಹಾಗೂ ಪಾಲಕರಿಗೆ ಇದು ಅರ್ಥವಾಗುವುದೇ ಇಲ್ಲ. ಬರೀ ಶಾಲೆಗಳಲ್ಲಿ ಒಳ್ಳೆಯ ಮಾರ್ಕ್ಸ್​ ತೆಗೆದರೆ ಮಾತ್ರ ಭವಿಷ್ಯತ್ತು ಉತ್ತಮ ಜೀವನ ಸಾಧ್ಯ ಎಂದು ಮಕ್ಕಳ ತಲೆಯಲ್ಲಿ ತುಂಬುತ್ತಾರೆ. ತಾವು ಜೀವನದಲ್ಲಿ ಮಾಡೋಕೆ ಆಗದೇ ಇರುವ ಸಾಧನೆ ಹಾಗೂ ಕನಸು ಅನ್ನು ಮಕ್ಕಳ ಮೇಲೆ ಹೇರುತ್ತಾರೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಅಂಥತದೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ತಂದೆಯ ಅಂಕಗಳ ವ್ಯಾವೋಹದಿಂದ 10ನೇ ತರಗತಿ ವಿದ್ಯಾರ್ಥಿನಿಯ ಉಸಿರು ನಿಂತಿದೆ.

10ನೇ ತರಗತಿಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಅಪ್ಪ ಗದರಿಸಿದ ಪರಿಣಾಮ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಏನು..?

ಗುಂಟೂರಿನ ಪಟ್ಟಾಭಿಪುರಂನಲ್ಲಿ ಒಬ್ಬ ಹುಡುಗಿ ಇತ್ತೀಚೆಗೆ ತನ್ನ ಹತ್ತನೇ ತರಗತಿ ಪರೀಕ್ಷೆಗಳನ್ನು ಬರೆದಳು. ಅವಳು ಈ ಫಲಿತಾಂಶಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದಳು. ಅವಳು 600 ಅಂಕಗಳಿಗೆ 560 ಅಂಕಗಳನ್ನು ಗಳಿಸಿದಳು. ಹತ್ತನೇ ತರಗತಿ ಮುಗಿದ ನಂತರ, ಅವಳ ತಂದೆ ಪಿಯುಸಿ ಸೇರಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದರು. ಆದಾಗ್ಯೂ, ಪಿಯುಸಿ ಸೇರಿಸುವ ಪ್ರಕ್ರಿಯೆಯಲ್ಲಿ, ಕಡಿಮೆ ಅಂಕಗಳನ್ನು ಪಡೆದಿದ್ದಕ್ಕಾಗಿ ಅವಳ ತಂದೆ ಹುಡುಗಿಯನ್ನು ಗದರಿಸಿದನು. ಇದರಿಂದ ಮನನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಈ ಕುರಿತು ವಿದ್ಯಾರ್ಥಿನಿ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net