

ಲಖೌನ: ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದೆ. ಈ ನಡುವೆ 14 ವರ್ಷದ ವಿದ್ಯಾರ್ಥಿನಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ನಡೆದಿದೆ.
ದಾಖಲಾದ 20 ದಿನಗಳ ಬಳಿಕ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥನಿ ಸಾವನ್ನಪ್ಪಿದ್ದಾಳೆ. ಸಂತ್ರೆಸ್ತೆಯನ್ನು ಸೋನಭದ್ರಾ ಜಿಲ್ಲೆಯ ದುದ್ದಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಉತ್ತರಪ್ರದೇಶದ ಬಲ್ಲಿಯಾ ಗ್ರಾಮದ ವಾಸಿ ವಿಶಾಂಬರ್ ಎಂದು ಗುರುತಿಸಲಾಗಿದ್ದು, ಈಗ ಪರಾರಿಯಾಗಿದ್ದಾನೆ.
ಸಂತ್ರಸ್ತೆಯ ಕುಟುಂಬದ ಪ್ರಕಾರ, ಆರೋಪಿಯು ಆಕೆ ಓದುತ್ತಿದ್ದ ಶಾಲೆಯಲ್ಲಿ ಕ್ರೀಡಾ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ, ಕಳೆದ ಡಿಸೆಂಬರ್ 30 ರಂದು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಹೇಳಿದ್ದನು. ಇದಾದ ಬಳಿಕ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ಸಾರ್ವಜನಿಕ ಅವಮಾನಕ್ಕೆ ಹೆದರಿ ಸಂತ್ರಸ್ತೆ ಏನನ್ನೂ ಮಾಡಲಿಲ್ಲ ಮತ್ತು ಘಟನೆಯ ನಂತರ ಆಕೆಯ ಆರೋಗ್ಯ ಕ್ರಮೇಣ ಆಕೆಯ ಆರೋಗ್ಯ ಹದಗೆಟ್ಟಿತು. ಚಿಕಿತ್ಸೆಗಾಗಿ ಅವಳನ್ನು ಛತ್ತಿಸ್‌ಗಢದಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಲಾಯಿತು. ಆದರೂ ಅವಳ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಆ ಸಮಯದಲ್ಲಿ ಸಂತ್ರಸ್ತೆ ಮೌನ ಮುರಿದು ಆದ ಘಟನೆಯ ಕುರಿತು ತನ್ನ ಚಿಕ್ಕಮ್ಮನಿಗೆ ತಿಳಿಸಿದ್ದಾಳೆ ಎಂದು ಸಂತ್ರಸ್ತೆಯ ಕುಟುಂಬದವರು ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬರಿಗೆ ಸಾರ್ವಜನಿಕರಿಂದ ಅವಮಾನವಾಗುವ ಭಯ ಇತ್ತು. ಇದನ್ನು ಸದುಪಯೋಗಪಡಿಸಿಕೊಂಡು ಆರೋಪಿಯು ಅವರಿಗೆ 30 ಸಾವಿರ ರೂಪಾಯಿಯನ್ನು ಕೊಟ್ಟು ಸುಮ್ಮನಿರಲು ತಿಳಿಸಿದ್ದಾನೆ. ಇದರಿಂದ ಅವರು ಪೊಲೀಸರ ಬಳಿ ದೂರು ದಾಖಲಿಸಲಿಲ್ಲ. ಕ್ರಮೇಣ ಅವಳ ಆರೋಗ್ಯ ಹದಗೆಡುತ್ತಾ ಹೋದಂತೆ ಜುಲೈ 10ರಂದು ಸಂತ್ರಸ್ತೆಯ ತಂದೆ, ವಿಶಾಂಬರ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಬಂಧನಕ್ಕೆ ಎರಡು ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.