ಮಾಸ್ಕ್​ ಮರೆತಿದ್ದಕ್ಕೆ ಗಾಬರಿ ಬಿದ್ದ ಜರ್ಮನಿ ಚಾನ್ಸಲರ್ ವಿಡಿಯೋ ವೈರಲ್

Angela Merkel
Published on

ಫ್ರಾಂಕ್​ಪರ್ಟ್​: ವಯಸ್ಸು 66 ಆದರೂ ರಾಜಕಾರಣದಲ್ಲಿ ಸದಾ ಸಕ್ರಿಯವಾಗಿರುವ ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.

ಜರ್ಮನಿಯಲ್ಲೂ ಕೋವಿಡ್ ಸೋಂಕು ವ್ಯಾಪಿಸಿದ್ದು ಅಲ್ಲಿನ ಸರ್ಕಾರ ಜನರಿಗೆ ಮಾಸ್ಕ್ ಧರಿಸುವುದನ್ನು ಕಟ್ಟುನಿಟ್ಟುಗೊಳಿಸಿದೆ. ಸ್ವತಃ ಚಾನ್ಸಲರ್ ಮರ್ಕೆಲ್ ಅವರು ಸದಾ ಮಾಸ್ಕ್ ಧರಿಸಿ ಜನರಿಗೆ ಪ್ರೇರಣೆ ಆಗಿದ್ದಾರೆ.

ಕಳೆದ ಶನಿವಾರ ಮರ್ಕೆಲ್ ಅವರು ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ್ದಾಗ ಮರ್ಕೆಲ್ ಅವರು ಮಾಸ್ಕ್ ಧರಿಸುವುದನ್ನು ಮರೆತಿದ್ದರು. ಈ ವೇಳೆ ಒಂದು ಕ್ಷಣ ಗಾಬರಿಯಾದ ಅವರು ಮಾಸ್ಕ್​ ಗಾಗಿ ತಡಕಾಡಿದ್ದಾರೆ. ಪಕ್ಕದಲ್ಲಿದ್ದ ಟೇಬಲ್​ನಲ್ಲಿ ಹೋಗಿ ಮಾಸ್ಕ್ ತೆಗೆದುಕೊಂಡು ತಮ್ಮ ಆಸನಕ್ಕೆ ಕುಳಿತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮರ್ಕೆಲ್ ಅವರ ಜವಾಬ್ದಾರಿ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮರ್ಕೆಲ್ ಅವರು 2005 ರಿಂದ ಜರ್ಮನಿಯ ಚಾನ್ಸಲರ್ ಆಗಿ ಆಡಳಿತ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net