ಇಬ್ಬನಿ ತಬ್ಬಿದ ಇಳೆಯಲಿ ಗಿರಿಜಾ ಶೆಟ್ಟರ್​ : 20 ವರ್ಷಗಳ ಬಳಿಕ ಚಿತ್ರರಂಗಕ್ಕೆ ವಾಪಸ್ಸಾದ ನಟಿ

Girija
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಚಂದ್ರಜಿತ್​ ಬೆಳ್ಳಿಯಪ್ಪ ನಿರ್ದೇಶಿಸುತ್ತಿರುವ ಚಿತ್ರ "ಇಬ್ಬನಿ ತಬ್ಬಿದ ಇಳೆಯಲಿ'. ಪರಂವಃ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ನಟ ರತ್​ ಶೆಟ್ಟಿ ಮತ್ತು ಜಿ.ಎಸ್​.ಗುಪ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದೊಂದು ವಿಭಿನ್ನ ಪ್ರೇಮಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಚಂದ್ರಜಿತ್​ ಒಂದು ಸುಮಧುರ ಪ್ರೇಮಕಾವ್ಯವನ್ನು ಹೇಳುವ ಪ್ರಯತ್ನದಲ್ಲಿದ್ದಾರೆ.

"ಪಂಚತಂತ್ರ' ಖ್ಯಾತಿಯ ನಟ ವಿಹಾನ್​ ಗೌಡ ಈ ಚಿತ್ರದ ನಾಯಕನಾಗಿದ್ದು, ಅವರಿಗೆ ಕಿರುತೆರೆ ನಟಿ ಅಂಕಿತಾ ಅಮರ್​ ನಾಯಕಿಯಾಗಿದ್ದಾರೆ. ಜತೆಗೆ "ಹೊಯ್ಸಳ' ಚಿತ್ರದಲ್ಲಿ ಮಿಂಚಿದ್ದ ಮಯೂರಿ ನಟರಾಜ್​ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದೀಗ ಹಿರಿಯ ನಟಿ ಗಿರಿಜಾ ಶೆಟ್ಟರ್​ ಚಿತ್ರತಂಡ ಸೇರಿಕೊಂಡಿದ್ದು, ಸ್ಟ್​ ಲುಕ್​ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅವರನ್ನು ಸ್ವಾಗತಿಸಿದೆ.

1989ರಲ್ಲಿ ರಿಲೀಸ್​ ಆದ ಮಣಿರತ್ನಂ ನಿರ್ದೇಶನದ ತೆಲುಗಿನ "ಗೀತಾಂಜಲಿ' ಚಿತ್ರದ ಮೂಲಕ ನಾಗಾರ್ಜುನಗೆ ನಾಯಕಿಯಾಗಿ ಗಿರಿಜಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರ ಮಲಯಾಳಂನಲ್ಲಿ "ವಂದನಂ', "ಧನುಷ್ಕೋಡಿ', ತೆಲುಗಿನಲ್ಲಿ "ಹೃದಯಾಂಜಲಿ' ಚಿತ್ರಗಳಲ್ಲಿ ನಟಿಸಿದ ಅವರು, 2003ರಲ್ಲಿ ತೆರೆಗೆ ಬಂದ ಹಿಂದಿ ಸಿನಿಮಾ "ತುಝೆ ಮೇರಿ ಕಸಮ್​' ಚಿತ್ರದ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಇದೀಗ ಎರಡು ದಶಕಗಳ ಬಳಿಕ "ಇಬ್ಬನಿ ತಬ್ಬಿದ ಇಳೆಯಲಿ' ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net