Gautam Gambhir: ಇದೇ ಜೂನ್ 20ರಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಕೇವಲ 7 ದಿನಗಳು ಬಾಕಿ ಇರುವಂತೆಯೇ ಇದೀಗ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಭಾರತಕ್ಕೆ ವಾಪಾಸ್ ಆಗಿದ್ದಾರೆ.
ಇದನ್ನೂ ಓದಿ: ಐದು ಕೋಟಿ ರೂ ವೆಚ್ಚದಲ್ಲಿ ಕೆರೆ ಅಭಿವೃದ್ಧಿ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ
ಟೆಸ್ಟ್ ಸರಣಿಗಾಗಿ ಈಗಾಗಲೇ ಇಂಗ್ಲೆಂಡ್ ತಲುಪಿರುವ ಭಾರತ ತಂಡ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಈ ಮಧ್ಯೆ ಆಟಗಾರರ ಜೊತೆಗಿದ್ದು, ಮುಂದಿನ ಸವಾಲುಗಳ ಕುರಿತು ಅರಿವು ಮೂಡಿಸಬೇಕಿದ್ದ ಗೌತಿ, ತಮ್ಮ ಮನೆಯಿಂದ ಬಂದ ದೂರವಾಣಿ ಕರೆಯ ಬೆನ್ನಲ್ಲೇ ದಿಢೀರ್ ತವರಿಗೆ ಮರಳಿದ್ದಾರೆ. ತುರ್ತು ಪರಿಸ್ಥಿತಿಯ ಹಿನ್ನಲೆ ಅವರು ಭಾರತಕ್ಕೆ ಹಿಂತಿರುಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗಂಭೀರ್ ಅವರ ತಾಯಿ ಹೃದಯಾಘಾತದಿಂದ ಬಳಲುತ್ತಿದ್ದು, ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳಿವೆ. ತಾಯಿಯ ಆರೋಗ್ಯ ಸ್ಥಿತಿ ಗಂಭೀರ ಎಂದು ತಿಳಿದ ಕೂಡಲೇ ಗಂಭೀರ್ ತಮ್ಮ ಇಂಗ್ಲೆಂಡ್ ಟೆಸ್ಟ್ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಲಿರುವ ಭಾರತ ತಂಡ, ಹೆಡ್ ಕೋಚ್ ಅನುಪಸ್ಥಿತಿಯಲ್ಲಿ ಹೇಗೆ ಮೊದಲ ಟೆಸ್ಟ್ನಲ್ಲಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ಪತ್ನಿ ಜೊತೆ…! ಬೇಸತ್ತ ಗಂಡ ನೇಣಿಗೆ ಶರಣು; ಖಾಕಿಗೆ ಸಿಕ್ಕ ಡೆತ್ನೋಟ್ನಲ್ಲಿತ್ತು ಶಾಕಿಂಗ್ ಸಂಗತಿ | Husband Death