VIDEO | ಸಿಲಿಂಡರ್ ತುಂಬಾ ಇತ್ತು ಝಣ..ಝಣ ಕಾಂಚಾಣ; ಇದೇನಪ್ಪಾ ವಿಚಿತ್ರ ಎಂದ ನೆಟ್ಟಿಗರು

Gas Cylinder Used Kiddy Bank Video Viral
Published on

ನವದೆಹಲಿ: ನಮ್ಮ ಮನೆಗಳಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಕಲವರು ಸ್ಟಂಟ್​​ ಮಾಡಲು ಬಳಸಿದ ವಿಡಿಯೋವನ್ನು ನೋಡಿದ್ದೇವೆ. ಆದರೆ ಸಿಲಿಂಡರ್ ಅನ್ನು ಹಣ ಸಂಗ್ರಹಿಸುವ ಹುಂಡಿ (kiddy bank) ಆಗಿ ಬಳಸುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಆದರೆ ಈ ಹೊಸ ಪ್ರಯೋಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಣ್ಣು ಮತ್ತು ಪ್ಲಾಸ್ಟಿಕ್‌ನಿಂದ ಮಾಡಿದ ಸಣ್ಣ ಹುಂಡಿಗಳನ್ನು ಖರೀದಿಸುತ್ತಾರೆ. ಕೆಲವರು ಮನೆಯಲ್ಲಿರುವ ಬಾಕ್ಸ್​​ಗಳನ್ನೇ ಸ್ವಂತ ಕಿಡ್ಡಿ ಬ್ಯಾಂಕ್‌ಗಳನ್ನು ಮಾಡುತ್ತಿದ್ದಾರೆ. ನಾಣ್ಯಗಳು ಮತ್ತು ನೋಟುಗಳನ್ನು ಸ್ಟೀಲ್ ಬಾಕ್ಸ್‌ಗಳಲ್ಲಿ ಮತ್ತು ಸಣ್ಣ ಲಾಕ್ ಮಾಡಬಹುದಾದ ಪೆಟ್ಟಿಗೆಗಳಲ್ಲಿ ಮರೆಮಾಡುತ್ತಾರೆ, ಆದರೆ ಇಂತಹ ವಿಚಿತ್ರವಾದ ಕಿಡ್ಡಿ ಬ್ಯಾಂಕ್ ಅನ್ನು ನೀವು ಈ ಹಿಂದೆ ಎಂದು ನೋಡಲು ಸಾಧ್ಯವೇ ಇಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?: ಹಣ ಕೂಡಿಡಲು ವ್ಯಕ್ತಿಯೊಬ್ಬ ಎಲ್‌ಪಿಜಿ ಸಿಲಿಂಡರ್ ಅನ್ನು ಕಿಡ್ಡಿ ಬ್ಯಾಂಕ್ ಆಗಿ ಪರಿವರ್ತಿಸಿದ್ದಾರೆ. ಅದರಲ್ಲಿ ನಾಣ್ಯಗಳನ್ನು ಹಾಕಿದ್ದು, ಸಿಲಿಂಡರ್ ತುಂಬಿದ ನಂತರ ಕತ್ತರಿಸಿ ತೆರೆದು ನೋಡಿದಾಗ ನಾಣ್ಯಗಳ ರಾಶಿ ಕಾಣಿಸಿದೆ. ಆದರೆ ಈ ಘಟನೆ ನಡೆದಿದ್ದು ಎಲ್ಲಿ ಎನ್ನುವ ಮಾಹಿತಿ ತಿಳಿದು ಬಂದಿಲ್ಲ.

ಒಬ್ಬ ವ್ಯಕ್ತಿಯು ಸಿಲಿಂಡರ್‌ನ ಮೇಲ್ಭಾಗವನ್ನು ಕತ್ತರಿಸುವುದನ್ನು ನಾವು ನೋಡಬಹುದು. ಸಿಲಿಂಡರ್‌ನ ತುಂಬಾ ನಾವು ರೂ.10 ನಾಣ್ಯಗಳನ್ನು ತುಂಬಿರುವುದನ್ನು ನೋಡಬಹುದು. ನಂತರ ಆ ವ್ಯಕ್ತಿ ಸಿಲಿಂಡರ್ ಅನ್ನು ತಿರುಗಿಸಿ ಎಲ್ಲಾ ನಾಣ್ಯಗಳನ್ನು ನೆಲದ ಮೇಲೆ ಹಾಕುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಏನಪ್ಪಾ ನಿನ್ನ ತಲೆ... ವಿಚಿತ್ರ ಹುಂಡಿಯಿಂದ ಎಷ್ಟು ಹಣ ಜಮೆಯಾಗಿದೆ ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net