ಕಾಂಗ್ರೆಸ್ ಯಾತ್ರೆ ವೇಳೆ ಕಳಚಿಬಿದ್ದ ಹಾರಗಳು; ಸೇಬು ಬಾಚಿಕೊಳ್ಳಲು ಮುಗಿಬಿದ್ದ ಕಾರ್ಯಕರ್ತರು!

Apple
Published on

ಕುಣಿಗಲ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪಟ್ಟಣದಲ್ಲಿ ಇಂದು ನಡೆದ ಪ್ರಜಾಧ್ವನಿ ಯಾತ್ರೆಯ ವೇಳೆ ಎರಡು ಹಾರಗಳು ತುಂಡಾಗಿ ಬಿದ್ದಿರುವ ಘಟನೆಗಳು ನಡೆದಿವೆ.

ಡಿ.ಕೆ. ಶಿವಕುಮಾರ್ ಅವರನ್ನು ಕುಣಿಗಲ್ ಪಟ್ಟಣಕ್ಕೆ ಅದ್ದೂರಿ ಬೃಹತ್ ಹಾರಗಳಿಂದ ಸ್ವಾಗತಿಸಲು ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಜ್ಜಾಗಿದ್ದರು. ಇದಕ್ಕಾಗಿ ಕೊಬ್ಬರಿ ಮತ್ತು ಸೇಬು ಹಣ್ಣುಗಳಿಂದ ಹಾರಗಳನ್ನು ತಯಾರಿಸಲಾಗಿತ್ತು.

ಡಿ.ಕೆ. ಶಿವಕುಮಾರ್ ಬರುವ ಮೊದಲೇ ಕುಣಿಗಲ್ ಪಟ್ಟಣದ ಅಂಚೆ ಪಾಳ್ಯದ ಬಳಿ ಅವರ ಸ್ವಾಗತಕ್ಕಾಗಿ ಕಾಯುತ್ತಿದ್ದ ಕೊಬ್ಬರಿ ಹಾರ ಕ್ರೇನ್‌ಗೆ ಹಾಕುವ ವೇಳೆ ತುಂಡಾಗಿ ಬಿತ್ತು. ಪಟ್ಟಣದ ಹುಚ್ಚಮಾಸ್ತಿಗೌಡ ವೃತದಲ್ಲಿ ಸೇಬಿನ ಬೃಹತ್ ಹಾರ ಡಿ.ಕೆ. ಶಿವಕುಮಾರ್ ಸ್ವಾಗತಕ್ಕಾಗಿ ಕಾಯುತ್ತಿತ್ತು. ಕಾಕತಾಳೀಯ ಎಂಬಂತೆ ಆ ಹಾರ ಕೂಡ ತುಂಡಾಗಿ ಬಿದ್ದಿದೆ. ಈ ಸಂದರ್ಭದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಸೇಬು ಹಣ್ಣುಗಳನ್ನು ಬಾಚಿಕೊಂಡಿದ್ದಾರೆ. ಈ ಎರಡು ಹಾರಗಳು ಕಳಚಿ ಬಿದ್ದಿರುವುದು ಕಾಂಗ್ರೆಸ್ ಪಕ್ಷದ ಪಾಲಿಗೆ ಅಪಶಕುನ ಎಂಬ ಚರ್ಚೆ ಈಗ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net