

ವಿಜಯಪುರ: ಡ್ರಗ್ಸ್ ವಿಚಾರ ಎಲ್ಲರ ಗಮನಸೆಳೆದಿರುವಾಗಲೇ ಪೊಲೀಸರು ವಿವಿಧೆಡೆ ದಾಳಿ ಆರಂಭಿಸಿದ್ದಾರೆ. ಇದರಂತೆ, ವಿಜಯಪುರ ಗಾಂಧಿಚೌಕ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 12 ಕೆಜಿ ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ.
ವಿಜಯಪುರ ನಗರದ ಜಮಖಂಡಿ ನಾಕಾ ಬಳಿ ದಾಳಿ ನಡೆಸಿ ಪತ್ತೆ ಮಾಡಲಾಗಿದೆ. ಹೊಲದಲ್ಲಿ ಬೇರೆ ಬೆಳೆಗಳ ಮಧ್ಯೆ ಬೆಳೆಯಲಾಗಿದ್ದ ಗಾಂಜಾ ಗಿಡಗಳು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿ ಕಾಂತು ನಾಯಕನನ್ನು ಬಂಧಿಸಿದ್ದಾರೆ.
ವಿಜಯಪುರ ಗಾಂಧಿಚೌಕ ಸಿಪಿಐ ರವೀಂದ್ರ ನಾಯ್ಕೋಡಿ, ಸಿಇಎನ್ ಠಾಣೆ ಸಿಪಿಐ ಸುನಿಲ ಕಾಂಬಳೆ ನೇತೃತ್ವದಲ್ಲಿ ದಾಳಿ ನಡೆಸಿ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ್ ಅಗರವಾಲ ಮಾಹಿತಿ ನೀಡಿದ್ದಾರೆ.
ಅಲ್ಲದೆ ಕಳೆದ ರಾತ್ರಿ ನಿಡಗುಂದಿ ಠಾಣೆ ಪೊಲೀಸರು ಸಹ ಭರ್ಜರಿ ಕಾರ್ಯಾಚರಣೆ ನಡೆಸಿ ಎರಡು ಲಕ್ಷ ರೂಪಾಯಿ ಮೌಲ್ಯದ 72 ಕೆಜಿ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಧರ್ಮ, ಕಲೆಗಳನ್ನು ಸಮನ್ವಯಗೊಳಿಸಿದ ಎಡನೀರು ಶ್ರೀ
ಮೆಕ್ಕೆಜೋಳದ ಮದ್ಯದಲ್ಲಿ ಗಾಂಜಾ ಬೆಳೆಸಿದ್ದ ಗ್ರಾಮದ ನಿವಾಸಿ ರವಿ ವಾಲಿಕಾರ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ. ಆರೋಪಿ ರವಿ ವಾಲಿಕಾರನನ್ನು ಬಂಧಿಸಲಾಗಿದ್ದು, ಈ ಕುರಿತು ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)