

ಆಸ್ಟಿನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಕಾವು ದಿನೇದಿನೆ ಹೆಚ್ಚಾಗುತ್ತಿದ್ದು, ಟೆಕ್ಸಾಸ್ ಲೇಕ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ನಡೆದ ಪರೇಡ್ ಸಂದರ್ಭದಲ್ಲಿ ಐದು ಬೋಟ್ಗಳು ಮುಳುಗಿ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎಲ್ಲ ಬೋಟ್ಗಳಲ್ಲೂ ಟ್ರಂಪ್ 2020 ಬಾವುಟಗಳಿದ್ದವು. ಬೋಟ್ ತುಂಬಾ ಟ್ರಂಪ್ ಬೆಂಬಲಿಗರಿದ್ದರು. ಬೋಟರ್ಗಳು ಪರೇಡ್ ಆರಂಭಿಸುತ್ತಿದ್ದಂತೆ ಲೇಕ್ನಲ್ಲಿ ಬೃಹದಾಕಾರದ ಅಲೆಗಳು ಸೃಷ್ಟಿಯಾಗಿದ್ದವು. ಪರಿಣಾಮ ಐದು ಬೋಟ್ಗಳು ಸಮತೋಲನ ಕಳೆದುಕೊಂಡು ಮಗುಚಿಬಿದ್ದು ಮುಳುಗಿದವು.
ಕೂಡಲೇ ಮುಳುಗಿದ ಬೋಟ್ಗಳಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಸರೋವರ 19,000 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಭಾನುವಾರ ಪ್ರಶಾಂತವಾಗಿದೆ. ದುರಂತಕ್ಕೆ ಬೋಟ್ಗಳು ಸೃಷ್ಟಿಸಿದ ಬೃಹತ್ ಅಲೆಗಳೇ ಕಾರಣ. ಮುಳುಗಿದ ಬೋಟ್ಗಳನ್ನು ನಂತರ ಎಳೆದು ದಡ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)