More

    ಪತ್ನಿ ಸಂಸಾರ ಮಾಡದೇ ತವರಿಗೆ ಹೋಗಿ ಕೂತಿದ್ದಾಳೆ, ವಾಪಸ್‌ ಬರಲು ಏನು ಮಾಡಲಿ?

    ಪತ್ನಿ ಸಂಸಾರ ಮಾಡದೇ ತವರಿಗೆ ಹೋಗಿ ಕೂತಿದ್ದಾಳೆ, ವಾಪಸ್‌ ಬರಲು ಏನು ಮಾಡಲಿ?ಪ್ರಶ್ನೆ: ನನ್ನ ಮದುವೆಯಾಗಿ ಒಂದು ವರ್ಷ ಆಗಿದೆ. ನನಗೆ ಮದುವೆ ಆದ ಹದಿನೈದು ದಿವಸದಲ್ಲಿ ಮೂತ್ರ ಸಮಸ್ಯೆಯಿಂದ ನಾಲ್ಕು ದಿನ ಆಸ್ಪತ್ರೆಯಲ್ಲಿ ಇದ್ದೆ. ಆಗ ನನ್ನ ಹೆಂಡತಿ ನನ್ನನ್ನು ನೋಡಲು ಬರಲೇ ಇಲ್ಲ.ಈವತ್ತಿನ ವರೆಗೂ ಬಂದಿಲ್ಲ. ಒಂದು ದಿನವೂ ನನ್ನ ಜತೆ ಸಂಸಾರ ಮಾಡಿಲ್ಲ. ನಾನು ಮದುವೆಗೆ ಎಂಟು ಲಕ್ಷ ಖರ್ಚು ಮಾಡಿದ್ದೇನೆ. ಬೇಕಾದಷ್ಟು ಒಡವೆ ವಸ್ತ್ರ ಹಣ ಕೊಟ್ಟಿದ್ದೇನೆ. ಅವಳಿಗೋಸ್ಕರ ಮದುವೆಗೋಸ್ಕರ ಬಹಳ ಸಾಲ ಮಾಡಿದ್ದೇನೆ. ಆದರೂ ಅವಳು ನನ್ನ ಜತೆ ಸಂಸಾರ ಮಾಡಲು ಬರುತ್ತಿಲ್ಲ. ಕೇಳಿದರೆ ಅವಳ ತಾಯಿ ಮತ್ತು ಸಂಬಂಧಿಕರು ನನಗೆ ಕೊಲೆ ಬೆದರಿಕೆ ಇಟ್ಟಿದ್ದಾರೆ. ನಾನು ಗಂಡನ ಮನೆಗೆ ಬಂದರೆ ಸಾಯುತ್ತೇನೆ ಅಂತ ಹೆಂಡತಿ ಹೇಳುತ್ತಿದ್ದಾಳೆ. ನನ್ನ ಹಣ, ಒಡವೆ ವಸ್ತ್ರ ಮತ್ತು ನನ್ನ ಹೆಂಡತಿ ನನಗೆ ಬೇಕು . ಈಗ ನಾನು ಏನು ಮಾಡಬಹುದು ತಿಳಿಸಿ?

    ಉತ್ತರ: ನಿಮಗೆ ಪ್ರಾಣ ಬೆದರಿಕೆ ಇದ್ದರೆ ಅದಕ್ಕೆ ಕೂಡಲೇ ಪೋಲೀಸರ ಹತ್ತಿರ ದೂರು ದಾಖಲಿಸಿ. ನಿಮ್ಮ ಪತ್ನಿ ನಮ್ಮ ಜತೆ ಬಂದು ಇರಬೇಕೆಂದು ನೀವು ಇಷ್ಟ ಪಡುವುದಾದರೆ, ಕೂಡಲೇ ದಾಂಪತ್ಯ ಜೀವನದ ಹಕ್ಕುಗಳ ಪುನರ್ ಸ್ಥಾಪನೆಗೆ ಪ್ರಕರಣ ದಾಖಲಿಸಿ. ಆಗ ನಿಮ್ಮಪತ್ನಿಗೆ ನೋಟೀಸು ಜಾರಿ ಆಗುತ್ತದೆ. ಆಕೆ ನ್ಯಾಯಾಲಯಕ್ಕೆ ಬಂದಾಗ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಕೂತು ಮಾತಾಡಿದಾಗ ನಿಮ್ಮ ಪತ್ನಿಯ ನಿಜವಾದ ಉದ್ದೇಶವೇನು ಎನ್ನುವುದು ತಿಳಿಯುತ್ತದೆ.

    ಇಬ್ಬರೂ ಒಪ್ಪಿದರೆ ಮತ್ತೆ ದಾಂಪತ್ಯ ಜೀವನ ಮುಂದುವರೆಸಬಹುದು. ಇಲ್ಲದಿದ್ದರೆ ಇಬ್ಬರೂ ಸೇರಿ ಒಪ್ಪಿಗೆಯಿಂದ ವಿಚ್ಛೇದನವನ್ನೂ ಪಡೆಯಬಹುದು. ಮಧ್ಯಸ್ಥಿಕೆಯಲ್ಲಿ ಮಾತಾಡುವಾಗ, ನೀವು ಕೊಟ್ಟಿರುವ ಒಡವೆ ಇತ್ಯಾದಿಗಳ ಬಗ್ಗೆಯೂ ಮಾತಾಡಬಹುದು.

    ದುಬಾರಿ ಮದುವೆ ಮಾಡಿಕೊಳ್ಳುವ ಮುಂಚೆಯೇ ಯೋಚಿಸಬೇಕು. ಯಾವುದೇ ಕಾರಣಕ್ಕೂ ನ್ಯಾಯಾಲಯದಿಂದ ಮದುವೆಯ ಖರ್ಚು ಸಿಕ್ಕುವ ಸಾಧ್ಯತೆ ಇರುವುದಿಲ್ಲ.

    (ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    (ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಇದನ್ನು ಕಾಪಿ ಮಾಡಿ ಪೇಸ್ಟ್‌ ಮಾಡಿ)

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/ 

    ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts