ಗಾಂಜಾ ಆರೋಪಿಗೆ 2 ವರ್ಷ ಜೈಲು

ganja
Published on

ಕಾಸರಗೋಡು: ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪಡನ್ನ ಆಲಕ್ಕಾಲ್ ನಿವಾಸಿ ನೂರ್‌ಮಹಮ್ಮದ್ ಅಲಿಯಾಸ್ ನೂರ ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪ್ರಿಯಾ ಕೆ. ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ನಾರ್ತ್ ಕೋಟಚ್ಚೇರಿಯಲ್ಲಿ ಹೊಸದುರ್ಗ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಮೂರು ಕಿಲೋ ಗಾಂಜಾ ವಶಪಡಿಸಿಕೊಂಡು ನೂರ್‌ಮಹಮ್ಮದ್ ಅಲಿಯಾಸ್ ನೂರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net