

ಗಂಗೊಳ್ಳಿ: ಗಂಗೊಳ್ಳಿ ಖಾರ್ವಿಕೇರಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಹಾಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ದೈವ ದೇವರ ಪುನಃ ಪ್ರತಿಷ್ಠಾಪನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
ಬುಧವಾರ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವ ಹಾಗೂ ಪುನಃ ಪ್ರತಿಷ್ಠಾಪನೆ ಧಾರ್ಮಿಕ ವಿಧಿವಿಧಾನ ಆರಂಭಗೊಂಡಿದ್ದು, ಗುರುವಾರ ಪ್ರತಿಷ್ಠಾಪನಾ ಹೋಮ, ಕಲಾ ಹೋಮ, ಶಿಖರ ಪ್ರತಿಷ್ಠಾಪನೆ, ಬಿಂಬ ಪ್ರತಿಷ್ಠಾಪನೆ, ಪ್ರಸನ್ನ ಪೂಜೆ, ಮಧ್ಯಾಹ್ನ ಹಾಗುಳಿ ದರ್ಶನ, ಕೊರಗಜ್ಜ ದರ್ಶನ, ಸಂಜೆ ಸುದರ್ಶನ ಹೋಮ, 108 ಬ್ರಹ್ಮಕಲಶ ಮಂಡಲ ಪೂಜೆ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಬೆಳಗ್ಗೆ ಬ್ರಹ್ಮಕಲಶಾಭಿಷೇಕ, ಸಪರಿವಾರ ಹಾಗುಳಿ ದೈವಕ್ಕೆ ಬ್ರಹ್ಮಕಲಶ ಅಭಿಷೇಕ, ಪಲ್ಲಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಮೊದಲಾದ ಧಾರ್ಮಿಕ ಕಾರ್ಯಕ್ರಮ ಬಿ.ಶ್ರೀಧರ ಭಟ್ ತಂತ್ರಿ ನೇತೃತ್ವದಲ್ಲಿ ಸಂಪನ್ನಗೊಂಡಿತು.
ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಚ್ಯುತ ಕೆ., ಗೌರವಾಧ್ಯಕ್ಷ ರಾಜೀವ ಕೆ., ಪ್ರಧಾನ ಕಾರ್ಯದರ್ಶಿ ಸುಧಕರ ಕೆ., ಜತೆ ಕಾರ್ಯದರ್ಶಿ ನಿರಂಜನ್ ಕೆ., ಪ್ರಶಾಂತ ಕೆ., ಪ್ರಮೋದ ಕೆ., ರವೀಂದ್ರ ಕೆ., ನೀಲಕಂಠ ಕೆ., ಖಾರ್ವಿಕೇರಿ ಮನೆ ಕುಟುಂಬಸ್ಥರು, ಮೊದಲಾದವರು ಉಪಸ್ಥಿತರಿದ್ದರು.