

ಗಂಗಾವತಿ: ರಾಜ್ಯದ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ ಖಂಡಿಸಿ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ಮಹಾಸಭಾ ಅಧ್ಯಕ್ಷ ಸಣ್ಣಮಾರೆಪ್ಪ ಮಾತನಾಡಿ, ರಾಜ್ಯದಲ್ಲಿ ಬಡ ಮತ್ತು ಅಲೆಮಾರಿ ಕುಟುಂಬಗಳ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಯಾದಗಿರಿ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ಘಟನೆ ನಡೆದು ಹಲವು ದಿನಗಳಾದರೂ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಲರಾಗಿದ್ದಾರೆ.
ಇದನ್ನೂ ಓದಿ : ದೌರ್ಜನ್ಯವೆಸಗಿದರೆ ಕಾನೂನು ಕ್ರಮ ಖಚಿತ
ಸೂಕ್ತ ಸಾಕ್ಷಾೃಧಾರಗಳಿದ್ದರೂ ಪೊಲೀಸರ ವೈಲ್ಯದಿಂದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ಒಳಪಡಿಸಬೇಕಿದ್ದು, ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವಿವಿಧ ಪ್ರಗತಿಪರ ಸಂಘಟನೆ ಸಹಯೋಗದೊಂದಿಗೆ ನಗರದ ಸಿಬಿಎಸ್ ವೃತ್ತದಿಂದ ಶ್ರೀಕೃಷ್ಣ ದೇವರಾಯ ವೃತ್ತದವರಿಗೂ ಪ್ರತಿಭಟನೆ ರ‌್ಯಾಲಿ ನಡೆಸಲಾಯಿತು. ನಂತರ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.
ಪದಾಧಿಕಾರಿಗಳಾದ ಕಲ್ಯಾಣ ನಾಗರಾಜ್, ಬಿ.ಎ.ರಾಮಣ್ಣ, ಆರ್. ಕೃಷ್ಣ, ತಿಪ್ಪೇಸ್ವಾಮಿ, ಕೋಟ ಯಲ್ಲಪ್ಪ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಜೆ.ಭಾರದ್ವಾಜ್, ಎಚ್.ಎಂ.ಶೈಲಜಾ, ಕೆ.ಅಂಬಣ್ಣ, ಸಿ.ಕೆ.ಮರಿಸ್ವಾಮಿ ಬರಗೂರು, ಎ.ಕೆ.ಮಹೇಶಕುಮಾರ, ರಾಘವೇಂದ್ರ ಚೌಡ್ಕಿ, ಕಲಿಕೇರಿ ಚಿನ್ನಪ್ಪ, ವಿಜಯದೊರೈರಾಜು ಇತರರಿದ್ದರು.