ನಾಲತವಾಡ: ಸಮೀಪದ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆಯ ಅಂಗವಾಗಿ 4ದಿನಗಳ ಕಾಲ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫೆ. 17ರಿಂದ ಆರಂಭಗೊಳ್ಳಲಿರುವ ಉತ್ಸವದಲ್ಲಿ ಲೊಟಗೇರಿಯ ಡಾ. ಗುರುಮೂರ್ತಿ ಕಣಕಾಲಮಠ ನೇತೃತ್ವದಲ್ಲಿ ಬೆಳಗ್ಗೆ 9ಕ್ಕೆ ನವಗ್ರಹ ಶಾಂತಿ ಹಾಗೂ ಹೋಮ ಹಮ್ಮಿಕೊಳ್ಳಲಾಗಿದೆ.
ಫೆ. 18ರಂದು ಕಳಸೋತ್ಸವ ನಡೆಯಲಿದೆ. ಬಲದಿನ್ನಿಯ ಧಣಿಗಳ ನಾಲತವಾಡದ ವಾಡೆಯಿಂದ ಕಳಸದ ಮೆರವಣಿಗೆಗೆ ಶಾಸಕ ನಾಡಗೌಡ ಹಾಗೂ ಸಹೋದರರು ಚಾಲನೆ ನೀಡಲಿದ್ದಾರೆ.ಅಯ್ಯನಗುಡಿಯಲ್ಲಿ ಉಜ್ಜಲಾದೇವಿ ನಾಡಗೌಡ ನೇತೃತ್ವದಲ್ಲಿ ರಾತ್ರಿ 8 ಗಂಟೆಯಿಂದ ತನಾರ್ಥಿ ಸೇವೆ ನಡೆಯಲಿದೆ.
ರಾತ್ರಿ 9ಗಂಟೆಗೆ ಪುರವಂತಿಕೆ, ವೀರಗಾಸೆ ನೃತ್ಯ ನಡೆಯಲಿದೆ. ನಂತರ ಪುಟ್ಟರಾಜ ಗವಾಯಿಗಳ ಕಲಾ ವೇದಿಕೆ ಮುದ್ದೇಬಿಹಾಳದ ಕಲಾ ತಂಡದಿಂದ ಸದಾಶಿವ ಗೋಂಧಳೆ ತಂಡದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ರಾತ್ರಿ 11ಕ್ಕೆ ದೇವರಗಡ್ಡಿ ಮತ್ತು ಹಾಲಬಾವಿಯಿಂದ ದೇವತೆಗಳ ಆಗಮನವಾಗಲಿದೆ.
ಫೆ. 19ರಂದು ಬೆಳಗ್ಗೆ 6ಕ್ಕೆ ರುದ್ರಾಭೀಷೇಕ, ಸಂಜೆ 4.30ರಿಂದ ಗಂಗಾಧರೇಶ್ವರನ ರಥೋತ್ಸವ ಜರುಗುವುದು. ಸಂಜೆ 6 ಗಂಟೆಗೆ ರಸಮಂಜರಿ ಕಾರ್ಯಕ್ರಮವಿದೆ. ರಾತ್ರಿ 8ಗಂಟೆಗೆ ನಾನಾ ಕಾರ್ಯಕ್ರಮಗಳ ಉದ್ಘಾಟನೆ ಜರುಗಲಿದೆ.
ಶಾಸಕ ಸಿ.ಎಸ್. ನಾಡಗೌಡ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕರ್ಣಕುಮಾರ ಜೈನಾಪುರ ಉದ್ಘಾಟಿಸುವರು. ಜನಪದ ಸಾಹಿತಿ ಶಂಕರ ಬೈಚಬಾಳ ಉಪನ್ಯಾಸ ನೀಡುವರು. ರಾತ್ರಿ 10.30ಕ್ಕೆ ಮನೆ ಹೊಕ್ಕ ಮಿಡಿ ನಾಗ ನಾಟಕ ಪ್ರದರ್ಶನಗೊಳ್ಳುವುದು.
ಫೆ. 20ರಂದು ಸಂಜೆ 6ಕ್ಕೆ ಮಸಬಿನಾಳದ ಮೌಲೇಸಾಬ ಮಕಾಂದಾರ ಹಾಗೂ ಅವ್ವಮ್ಮ ಬ್ಯಾಲಿಹಾಳ ಇವರಿಂದ ಗೀಗೀ ಪದಗಳು, ರಾತ್ರಿ 10.30ಕ್ಕೆ ಅಪ್ಪ ಅಪರಂಜಿ ತಂಗಿ ಗುಲಗುಂಜಿ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ. 21ರಂದು ಸಂಜೆ 6 ಗಂಟೆಯಿಂದ ವಾದಿ ಬೀದಿ ಚೌಡಕಿ ಪದಗಳು ನಂತರ ಸಮಾರೋಪ ಸಮಾರಂಭ ನಡೆಯಲಿದೆ ರಾತ್ರಿ 10.30ಕ್ಕೆ ಮನೆ ಮುರುಕ ಅಳಿಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.