ಗಣೇಶ ವಿಸರ್ಜನೆ: ವಿದ್ಯುತ್ ತಂತಿ ಮೇಲೆತ್ತುವ ವೇಳೆ ಕರೆಂಟ್​ ಶಾಕ್​ನಿಂದ ಯುವಕ ದುರ್ಮರಣ! Ganesha immersion

Ganesha immersion
Published on

Ganesha immersion : ಏಳನೇ ದಿನದ ಗಣೇಶ ವಿಸರ್ಜನೆ ವೇಳೆ ಅವಘಡ ಸಂಭವಿಸಿ ಓರ್ವ ಯುವಕ ಅಸುನೀಗಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ ವೃತ್ತದ ಬಳಿಯ ಟಾಂಗಾ ಸ್ಟ್ಯಾಂಡ್ ಬಳಿ ಮಂಗಳವಾರ (ಸೆ.02) ರಾತ್ರಿ ನಡೆದಿದೆ.

ಗಣೇಶನ ಮೂರ್ತಿ ಮೆರವಣಿಗೆ ಸಾಗುವ ದಾರಿಯಲ್ಲಿ ವಿದ್ಯುತ್ ತಂತಿಯನ್ನು ಮೇಲೆತ್ತುವ ವೇಳೆ ವಿದ್ಯುತ್ ಪ್ರವಹಿಸಿ ನಗರದ ಡೋಬಲೆ ಗಲ್ಲಿ ನಿವಾಸಿ ಶುಭಂ ಸಂಕಳ (21) ಮೃತಪಟ್ಟಿದ್ದಾನೆ. ಪ್ರಭಾಕರ ಜಂಗಲೆ ಹಾಗೂ ಲಖನ್ ಚವ್ಹಾಣ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಗಣೇಶನ ಮೂರ್ತಿ ಸಾಗಲು ಕೋಲಿನಿಂದ ವಿದ್ಯುತ್ ತಂತಿ ಎತ್ತುವ ವೇಳೆ ಕರೆಂಟ್ ಶಾಕ್‌ನಿಂದ ಈ ದುರ್ಘಟನೆ ಆಗಿದೆ.‌ ನಗರದಲ್ಲಿ ಏಳನೇ ದಿನ ನೂರಾರು ಗಣೇಶನ ಮೂರ್ತಿಗಳು‌ ವಿಸರ್ಜನೆ ಮಾಡಲಾಯಿತು. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮುನ್ನೆಚ್ಚರಿಕೆ ಇರಲಿ

* ಸರ್ಕಾರ/ಸ್ಥಳೀಯ ಸಂಸ್ಥೆಗಳಿಂದ ಒದಗಿಸಲಾದ ವಿಸರ್ಜನೆ ಕೇಂದ್ರಗಳನ್ನು (ಕೃತಕ ಕೊಳಗಳು) ಬಳಸಿ.

* ನದಿ, ಕೆರೆ, ಅಥವಾ ಸಮುದ್ರದಂತಹ ನೈಸರ್ಗಿಕ ಜಲಾಶಯಗಳನ್ನು ಸಾಧ್ಯವಾದಷ್ಟು ತಪ್ಪಿಸಿ, ಇದರಿಂದ ಜಲ ಮಾಲಿನ್ಯ ಕಡಿಮೆಯಾಗುತ್ತದೆ.

* ಮನೆಯಲ್ಲಿ ಬಕೆಟ್ ಅಥವಾ ತೊಟ್ಟಿಯಲ್ಲಿ ವಿಸರ್ಜನೆ ಮಾಡುವುದು ಪರಿಸರ ಸ್ನೇಹಿಯಾಗಿರುತ್ತದೆ.

* ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ವಿದ್ಯುತ್​ ಕಂಬಗಳ ಬಗ್ಗೆ ಎಚ್ಚರವಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net