ಮೌನೇಶ್ ಕುಮಾರ್ ಛಾವಣಿ ಸಂಗೀತ ಕಛೇರಿ

New Project (20)
Published on

ಬಂಟ್ವಾಳ: ಬಿ.ಸಿ.ರೋಡ್‌ನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಭಾನುವಾರ ಬೆಳಗ್ಗೆ ಆಕಾಶವಾಣಿ ಕಲಾವಿದ ಮೌನೇಶ್ ಕುಮಾರ್ ಛಾವಣಿ ಅವರ ಉದಯಗಾನ ಕಾರ್ಯಕ್ರಮ ಏರ್ಪಡಿಸಲಾಯಿತು.

ಬಂಟ್ವಾಳದ ವೈದ್ಯ ದಂಪತಿ ಡಾ.ವಿಜಯ್ ತೋಳ್ಪಾಡಿ ಹಾಗೂ ಡಾ.ವೀಣಾ ತೋಳ್ಪಾಡಿ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ 6ರಿಂದ 8ರವರೆಗೆ ದಾಸಸಾಹಿತ್ಯ ಸಹಿತ ಹಲವು ಕೃತಿಗಳನ್ನು ಮೌನೇಶ್ ಕುಮಾರ್ ಛಾವಣಿ ಪ್ರಸ್ತುತಪಡಿಸಿದರು. ಈ ಸಂದರ್ಭ ತಬಲಾದಲ್ಲಿ ಗೌತಮ್ ಜಪ್ಪಿನಮೊಗರು, ಕೊಳಲಿನಲ್ಲಿ ಲೋಕೇಶ್ ಸಂಪಿಗೆ, ತಾನ್‌ಪುರದಲ್ಲಿ ಭಾರತೀಶ್ ಛಾವಣಿ ಸಾಥ್ ನೀಡಿದರು. ಕಲಾವಿದರನ್ನು ಹಿರಿಯ ವೈದ್ಯ ಡಾ.ಎಂ.ಎಸ್.ಭಟ್ ಗೌರವಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಹಾಗೂ ನಿರ್ದೇಶಕರಾದ ಡಾ.ಆಶಾಲತಾ ಸುವರ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net