

ಸುಬ್ರಹ್ಮಣ್ಯ: ಶ್ರೀ ವಿಷ್ಣು ಸಹಸ್ರನಾಮ ಪಠಣ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣವು ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಿತು. ಕುಮಾರಧಾರಾ ನದಿಯ ಅಗ್ರಹಾರ ತೀರ್ಥದ ತಟದಲ್ಲಿ ಸುಬ್ರಹ್ಮಣ್ಯದ 50ಕ್ಕೂ ಅಧಿಕ ಮಂದಿ ವಿಷ್ಣು ಸಹಸ್ರನಾಮ ಪಠಿಸಿದರು. ಹಿರಿಯರು ಕಿರಿಯರೆನ್ನದೆ ಸರ್ವರೂ ಈ ದೇವತಾ ಕಾರ್ಯದಲ್ಲಿ ಪಾಲ್ಗೊಂಡರು.
ರಾಷ್ಟ್ರ ಹಿತಕ್ಕಾಗಿ, ಕೌಟುಂಬಿಕ ಹಾಗೂ ವೈಯಕ್ತಿಕ ಉತ್ಕೃರ್ಷಕ್ಕಾಗಿ, ಪ್ರಕೃತಿ ಸಂರಕ್ಷಣೆ, ಮನುಕುಲದ ಒಳಿತು ಹಾಗೂ ವೃಷ್ಟಿ ಮತ್ತು ಸಮಷ್ಟಿಯ ಹಿತಕ್ಕಾಗಿ ವಿಷ್ಣು ಸಹಸ್ರನಾಮ ಪಠಣ ಮಾಡಿದ್ದೇವೆ. ಈ ಮೂಲಕ ಅಭಿಯಾನದಲ್ಲಿ ಕರಜೋಡಿಸಿದ್ದೇವೆ ಎಂದು ಪಠಣ ಮಾಡಿದ ಭಕ್ತರು ಹೇಳಿದರು.