ಈಗ ಈ ಪ್ರಶ್ನೆಗೆ ಉತ್ತರಿಸುವುದು ನನ್ನಿಂದ ಕಷ್ಟ: ಗೌತಮ್ ಗಂಭೀರ್​

Untitled design - 2024-06-22T073223.081
Published on

ನವದೆಹಲಿ: ಟೀಂ ಇಂಡಿಯಾದ ಹೆಡ್​ ಕೋಚ್ ಹುದ್ದೆಗೆ ಸದ್ಯ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದ್ದು, ಬಹುತೇಕ ಗೌತಿ ಅವರೇ ಫಿಕ್ಸ್​ ಎಂದು ಹೇಳಲಾಗುತ್ತಿದೆ. ಆದರೂ ಸಹ ಬಿಸಿಸಿಐ ಹೊರಡಿಸಲಿರುವ ಅಧಿಕೃತ ಪ್ರಕಟಣೆಗಾಗಿ ನಿರೀಕ್ಷಿಸಬೇಕಿದೆ. ಇನ್ನು ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಗೌತಮ್​, ತಮಗೆ ಕೇಳಲಾದ ಒಂದು ಪ್ರಶ್ನೆಗೆ ಈಗ ಇದಕ್ಕೆ ಉತ್ತರಿಸುವುದು ನನ್ನಿಂದ ಬಹಳ ಕಷ್ಟ ಎಂದು ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್​ ಆಗಿ ತಂಡವನ್ನು ಚಾಂಪಿಯನ್​ ಪಟ್ಟಕ್ಕೆ ಏರಿಸಿದ ಗಂಭೀರ್​, 17ನೇ ಸೀಸನ್​ನಲ್ಲಿ ಕೆಕೆಆರ್​ ಗೆಲುವಿನ ಹಿಂದೆ ಪ್ರಮುಖ ಪಾತ್ರವನ್ನು ವಹಿಸುವುದರೊಂದಿಗೆ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಇನ್ನು ವಿದೇಶಿ ನೆಲದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಭಾರತ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್​ ಅವರ ಅವಧಿ, ಈ ಟೂರ್ನಿ ಅಂತ್ಯಗೊಳ್ಳುತ್ತಿದ್ದಂತೆ ಮುಕ್ತಾಯವಾಗಲಿದೆ.

ಮುಂದಿನ ದಿನಗಳಲ್ಲಿ ರಾಹುಲ್ ದ್ರಾವಿಡ್​ ಅವರ ಸ್ಥಾನವನ್ನು ನೀವು ತುಂಬುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಭೀರ್, "ಇದು ತುಂಬ ದೂರದ ಮಾತು. ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರಿಸುವುದು ನನ್ನಿಂದ ಕಷ್ಟ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net