ಗಂಭೀರ್​- ರೋಹಿತ್​​ ಅಲ್ಲವೇ ಅಲ್ಲಾ… ಇವರೇ ನೋಡಿ ಹಾರ್ದಿಕ್​ ನಾಯಕತ್ವದ ಕನಸನ್ನು ಭಗ್ನಗೊಳಿಸಿದವರು

Team India

ನವದೆಹಲಿ: ಈ ತಿಂಗಳಾಂತ್ಯ ಅಂದರೆ ಜುಲೈ 27ರಂದು ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು. ಏಕದಿನಕ್ಕೆ ರೋಹಿತ್​ ಹಾಗೂ ಟಿ20ಗೆ ಸೂರ್ಯಕುಮಾರ್​ ಯಾದವ್​ರನ್ನು ನಾಯಕನ್ನಾಗಿ ನೇಮಿಸಲಾಗಿದೆ. ಟಿ20 ಮಾದರಿಗೆ ಹಾದರ್ಇಕ್​ ಪಾಂಡ್ಯ ಹೆಸರು ಮುನ್ನೆಲೆಗೆ ಬಂದಿತ್ತಾದರೂ ಅಂತಿಮವಾಗಿ ಆಯ್ಕೆ ಸೂರ್ಯಕುಮಾರ್​ ಯಾದವ್​ಗೆ ಮಣೆ ಹಾಕಿತ್ತು. ಆದರೆ, ಹಾರ್ದಿಕ್​ಗೆ ನಾಯಕತ್ಚ ಸಿಗದಿರುವ ಹಿಂದೆ ಒಬ್ಬರ ಕೈವಾಡವಿದ್ದು, ಅವರ ನಿರ್ಧಾರದಂತೆಯೇ ಇವೆಲ್ಲಾ ನಡೆದಿದೆ ಎಂದು ವರದಿಯಾಗಿದೆ.

ಟಿ20 ಮಾದರಿಗೆ ರೋಹಿತ್​ ಶರ್ಮಾ ನಿವೃತ್ತಿ ಘೋಷಿಸಿದ ಬಳಿಕ ಹಾರ್ದಿಕ್​ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಪಾಂಡ್ಯ ತಮ್ಮ ನಾಯಕತ್ವದಲ್ಲಿ ಹಲವು ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿ ಗೆಲ್ಲಿಸಿದ್ದರು. ಇದೆಲ್ಲದರ ಹೊರತಾಗಿಯೂ ಪಾಂಡ್ಯ ನಾಯಕನ ಸ್ಥಾನದಿಂದ ಅವಕಾಶ ವಂಚಿತರಾಗಿದ್ದು, ನೂತನ ಕೋಚ್ ಗೌತಮ್​ ಗಂಭೀರ್​ ಹಾಗೂ ರೋಹಿತ್​​ ಶರ್ಮಾ ಅವರ ಕೈವಾಡವಿದೆ ಎಂದು ಆರೋಪಿಸಲಾಗಿದೆ.

ನಾಯಕನ ಆಯ್ಕೆ ವಿಚಾರವಾಗಿ ನೂತನ ಕೋಚ್ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯಗಳಲ್ಲಿ ಕೆಲ ಮುಖ್ಯ ವಿಷಯಗಳನ್ನು ಆಯ್ಕೆ ಸಮಿತಿಯ ಮುಂದಿಟ್ಟಿದ್ದಾರೆ. ಸೂರ್ಯಕುಮಾರ್​ ಯಾದವ್​ರನ್ನು ನಾಯಕನನ್ನಾಗಿ ನೇಮಿಸಲು ಗೌತಮ್​ ಹೆಚ್ಚು ಉತ್ಸುಕರಾಗಿದ್ದು, ಹಾರ್ದಿಕ್​ ಪಾಂಡ್ಯರನ್ನು ನೇಮಿಸದಂತೆ ಒತ್ತಡ ಹೇರಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕನಾದರೆ, ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಆತನ ಫಿಟ್ನೆಸ್​ ತಂಡಕ್ಕೆ ದೊಡ್ಡ ತಲೆನೋವಾಗಿದ್ದು, ಹೀಗಾಗಿ ಟೀಮ್ ಇಂಡಿಯಾ ಪರ ಖಾಯಂ ಆಗಿ ಕಾಣಿಸಿಕೊಳ್ಳುವ ಆಟಗಾರನಿಗೆ ನಾಯಕತ್ವ ನೀಡುವಂತೆ ಗಂಭೀರ್ ಆಯ್ಕೆ ಸಮಿತಿ ಮೇಲೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿತ್ತು. ಇದಲ್ಲದೆ ರೋಹಿತ್​ ಶರ್ಮಾ ಕೂಡ ಆಯ್ಕೆ ಸಮಿತಿ ಮೇಲೆ ಒತ್ತಡ ಹೇರಿದ್ದರು ಎಂದು ವದಂತಿ ವ್ಯಾಪಕವಾಗಿ ಹರಿದಾಡಿತ್ತು. ಇದೇ ಕಾರಣದಿಂದಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಇಂಡಿಯಾ ಟಿ20 ತಂಡದ ನಾಯಕನಾಗಿ ಆಯ್ಕೆ ಮಾಡಲಾಯಿತು ಎಂದು ಹೇಳಲಾಗಿದೆ.

Rohit Agarkar

ಇದನ್ನೂ ಓದಿ: ಆಕೆ ಒಂಟಿ… ಈ ಕೆಲಸಕ್ಕಾಗಿ ಪ್ರತಿನಿತ್ಯ 320 ಕಿ.ಮೀ ಪ್ರಯಾಣಿಸುತ್ತಾನೆ!

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಗಂಭೀರ್ ಅವರೇ ನೇರವಾಗಿ ಸೂರ್ಯ ಟಿ20 ತಂಡದ ನಾಯಕನಾಗಬೇಕು ಎಂದು ಕೇಳಿಲ್ಲ. ಆದರೆ ಗೌತಮ್ ಗಂಭೀರ್ ಪ್ರಕಾರ, ಟಿ20 ತಂಡದ ನಾಯಕತ್ವ ವಹಸಿಕೊಳ್ಳುವ ವ್ಯಕ್ತಿ ಕೆಲಸದ ಹೊರೆ ನಿರ್ವಹಣೆಯ ಸಮಸ್ಯೆಯಿಂದ ದೂರ ಇರಬೇಕು ಎಂಬುದಾಗಿತ್ತು. ಅಂದರೆ ಕೆಲಸದ ಹೊರೆ ಅಡ್ಡಿಯಾಗದ ನಾಯಕನೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಗಂಭೀರ್ ಆಯ್ಕೆ ಸಮಿತಿಗೆ ಸ್ಪಷ್ಟಪಡಿಸಿದ್ದರು.

ಹೀಗಾಗಿ ಈ ನಿಟ್ಟಿನಲ್ಲಿ ತಂತ್ರ ರೂಪಿಸಲು ಮುಂದಾದ ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್ ಅಗರ್ಕರ್ ಸೂರ್ಯಕುಮಾರ್​ರನ್ನು ನಾಯಕನ್ನಾಗಿ ನೇಮಿಸಿದರು. ಆಯ್ಕೆಗಾರರು ಕೂಡ ಆಟಗಾರರ ಜತೆ ಮಾತುಕತೆ ನಡೆಸಿದ್ದು, ಇದರಲ್ಲಿ ಹಾರ್ದಿಕ್​ಗಿಂತ ಸೂರ್ಯ ಉತ್ತಮ ನಾಯಕ ಎಂಬುದು ಬೆಳಕಿಗೆ ಬಂದಿತು. ಹೀಗಾಗಿ ಹಾರ್ದಿಕ್ ಬದಲು ಸೂರ್ಯಕುಮಾರ್ ಯಾದವ್​ಗೆ ನಾಯಕತ್ವ ನೀಡಲು ಆಯ್ಕೆ ಸಮಿತಿ ಮುಖ್ಯಸ್ಥರು ನಿರ್ಧರಿಸಿದರು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

30 ದಿನಗಳಲ್ಲೇ ಸ್ಲಿಮ್ ಆ್ಯಂಡ್​ ಫಿಟ್​ ಆಗಬೇಕಾ? ಪ್ರತಿದಿನ ಇಡ್ಲಿ ತಿನ್ನಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…