

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಉಪ್ಪಿನಂಗಡಿ ಹೋಬಳಿ ಘಟಕದ ವತಿಯಿಂದ ಶನಿವಾರ ಗಮಕ ಸೌರಭ ಕಾರ್ಯಕ್ರಮ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದ ವಿವಿಧ ಮಜಲುಗಳನ್ನು ಎಳೆ ಮನಸ್ಸುಗಳಿಗೆ ತಲುಪಿಸುವ ಕಾರ್ಯ ಸಾಹಿತ್ಯ ಪರಿಷತ್‌ನಿಂದ ನಡೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದರು.
ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಉದಯ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಘಟಕದ ಗೌರವ ಕೋಶಾಧಿಕಾರಿ ಡಾ.ಗೋವಿಂದ ಪ್ರಸಾದ್ ಕಜೆ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ್, ಗಮಕ ಕಲಾ ಸಾಧಕರಾದ ಗಣಪತಿ ಭಟ್ ಪದ್ಯಾಣ ಹಾಗೂ ಮುಳಿಯ ಶಂಕರ್ ಭಟ್ ಉಪಸ್ಥಿತರಿದ್ದರು.
ಉತ್ತರ ಕುಮಾರನ ಪೌರುಷ ಎಂಬ ಕಾವ್ಯ ವಿಚಾರದಲ್ಲಿ ಗಮಕ ವಾಚನವನ್ನು ಗಣಪತಿ ಪದ್ಯಾಣ ಗಮಕ ವ್ಯಾಖ್ಯಾನವನ್ನು ಮುಳಿಯ ಶಂಕರ್ ಭಟ್ ನಡೆಸಿಕೊಟ್ಟರು. ಡಾ.ತಾಳ್ತಜೆ ವಸಂತಕುಮಾರ, ಪ್ರೊ.ನಂದೀಶ್ ವೈ.ಡಿ., ಪ್ರೊ.ಹುಚ್ಚೇಗೌಡ, ಉಪನ್ಯಾಸಕ ರಮೇಶ್, ಸುನೀಲ್ ದಡ್ಡು, ರಾಜೇಂದ್ರ ಭಟ್, ವೀಣಾ ಕಜೆ, ರಮೇಶ್ ಕಜೆ, ಅಬ್ದುಲ್ ರಹಿಮಾನ್ ಯೂನಿಕ್, ಶಾಂತಾ ಕುಂಟಿನಿ, ಮೋಹನ್ ಭಟ್, ಸುನೀತಾ, ಶೀಲಾ ಭವನೇಶ್ವರಿ ರೈ, ನಝೀರ್ ಕೊಯಿಲ ಮೊದಲಾದವರು ಭಾಗವಹಿಸಿದ್ದರು.
ಶ್ರೀ ರಾಮ ಶಾಲಾ ಮುಖ್ಯಶಿಕ್ಷಕಿ ವಿಮಲಾ ತೇಜಾಕ್ಷಿ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್ ಸ್ವಾಗತಿಸಿ, ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯಶಿಕ್ಷಕಿ ವೀಣಾ ಪ್ರಸಾದ್ ವಂದಿಸಿದರು.