ಜಗತ್ತಿನ ಅತಿ ಹೆಚ್ಚು ಕಾಲ ಬದುಕುವ ಜನರು ಸೇವಿಸುವ 6 ರಹಸ್ಯ ಆಹಾರಗಳಿವು..!
ಆಯಸ್ಸು ಹೆಚ್ಚಿಸುವ ಅಥವಾ ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಸಹಾಯ ಮಾಡುವ ಆಹಾರಗಳ ಬಗ್ಗೆ ವಿಜ್ಞಾನಿಗಳು ಮತ್ತು ಬ್ಲೂ ಝೋನ್ ಸಂಶೋಧಕರು ಪಟ್ಟಿ ಮಾಡಿರುವ 10 ಪ್ರಮುಖ ಆಹಾರಗಳು ಇಲ್ಲಿವೆ.
1. ದ್ವಿದಳ ಧಾನ್ಯಗಳು
ಬೀನ್ಸ್, ಹೆಸರುಕಾಳು, ಕಡಲೆ ಮತ್ತು ಮಸೂರ ಬೇಳೆಗಳನ್ನು ದೀರ್ಘಾಯುಷ್ಯದ 'ಸೂಪರ್‌ಫುಡ್' ಎನ್ನಲಾಗುತ್ತದೆ. ಇವುಗಳಲ್ಲಿ ಪ್ರೊಟೀನ್ ಮತ್ತು ನಾರಿನಂಶ ಸಮೃದ್ಧವಾಗಿದ್ದು, ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತವೆ.
2. ಸೊಪ್ಪು ಮತ್ತು ಎಲೆಕೋಸು
ಪಾಲಕ್, ದಂಟು ಮತ್ತು ಮೆಂತೆ ಸೊಪ್ಪುಗಳಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಹೇರಳವಾಗಿವೆ. ಇವು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ವಯಸ್ಸಾದಂತೆ ಬರುವ ಮರೆವಿನ ಕಾಯಿಲೆಗಳನ್ನು ತಡೆಯುತ್ತವೆ.
3. ಒಣ ಹಣ್ಣುಗಳು ಮತ್ತು ಬೀಜಗಳು
ಬಾದಾಮಿ, ವಾಲ್‌ನಟ್ ಮತ್ತು ಅಗಸೆ ಬೀಜಗಳು ಮೆದುಳು ಮತ್ತು ಹೃದಯಕ್ಕೆ ಬೇಕಾದ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒದಗಿಸುತ್ತವೆ. ಪ್ರತಿದಿನ ಒಂದು ಹಿಡಿ ನಟ್ಸ್ ತಿನ್ನುವವರು ಇತರರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ.
4. ಬೆರ್ರಿ ಹಣ್ಣುಗಳು
ಬ್ಲೂಬೆರ್ರಿ, ಸ್ಟ್ರಾಬೆರಿ ಅಥವಾ ನಮ್ಮಲ್ಲಿ ಸಿಗುವ ನೇರಳೆ ಹಣ್ಣುಗಳಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಅಧಿಕವಾಗಿರುತ್ತವೆ. ಇವು ದೇಹದ ಜೀವಕೋಶಗಳು ಬೇಗನೆ ವಯಸ್ಸಾಗದಂತೆ ತಡೆಯುತ್ತವೆ.
5. ಸಾಲ್ಮನ್ ಅಥವಾ ಕೊಬ್ಬಿನಂಶವಿರುವ ಮೀನು
ನೀವು ಮಾಂಸಾಹಾರ ಸೇವಿಸುವವರಾಗಿದ್ದರೆ, ವಾರಕ್ಕೆ ಎರಡು ಬಾರಿ ಮೀನು ಸೇವಿಸುವುದು ಒಳ್ಖೆಯದು. ಇದು ಮೆದುಳಿನ ಆರೋಗ್ಯಕ್ಕೆ ಮತ್ತು ಕೀಲು ನೋವು ತಡೆಯಲು ಸಹಕಾರಿ.
6. ಮೊಸರು ಮತ್ತು ಪ್ರೋಬಯಾಟಿಕ್ ಆಹಾರಗಳು
ಮಜ್ಜಿಗೆ ಅಥವಾ ಮೊಸರು ಕರುಳಿನ ಆರೋಗ್ಯಕ್ಕೆ ಅತ್ಯುತ್ತಮ. ಕರುಳು ಆರೋಗ್ಯವಾಗಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಇದು ದೀರ್ಘಾಯುಷ್ಯಕ್ಕೆ ಅಡಿಪಾಯ.