ರಾತ್ರಿ ಮಲಗುವ ಮುನ್ನ ತಿನ್ನಲೇಬಾರದ 4 ಹಣ್ಣುಗಳಿವು!

ರಾತ್ರಿ ಮಲಗುವ ಮುನ್ನ ತಿನ್ನಲೇಬಾರದ 4 ಹಣ್ಣುಗಳಿವು!
ರಾತ್ರಿ ಮಲಗುವ ಮುನ್ನ ತಿನ್ನಲೇಬಾರದ 4 ಹಣ್ಣುಗಳಿವು!
Published on
These are the 4 fruits you should never eat before going to bed!

ರಾತ್ರಿ ಮಲಗುವ ಮುನ್ನ ತಿನ್ನಲೇಬಾರದ 4 ಹಣ್ಣುಗಳಿವು!

ಬೆಂಗಳೂರು: ಹಣ್ಣುಗಳು ಪ್ರಕೃತಿಯ ವರ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಯಾವ ಸಮಯದಲ್ಲಿ ಏನನ್ನು ತಿನ್ನಬೇಕು ಎಂಬುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ರಾತ್ರಿ ಹೊತ್ತು ಲಘು ಆಹಾರ ಸೇವಿಸಬೇಕು ಎಂದು ಅನೇಕರು ಹಣ್ಣುಗಳನ್ನು ಆಯ್ದುಕೊಳ್ಳುತ್ತಾರೆ.
These are the 4 fruits you should never eat before going to bed!

1. ಸಿಟ್ರಸ್ ಹಣ್ಣುಗಳು

ಕಿತ್ತಳೆ ಅಥವಾ ಮೂಸಂಬಿಯಂತಹ ಹಣ್ಣುಗಳಲ್ಲಿ ಆಸಿಡ್ ಪ್ರಮಾಣ ಹೆಚ್ಚಿರುತ್ತದೆ. ಇವುಗಳನ್ನು ರಾತ್ರಿ ಸೇವಿಸುವುದರಿಂದ ಎದೆಯುರಿ ಮತ್ತು ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲದೆ, ಇವುಗಳಲ್ಲಿರುವ ವಿಟಮಿನ್ ಸಿ ನಿಮ್ಮನ್ನು ಹೆಚ್ಚು ಜಾಗೃತವಾಗಿರಿಸುವುದರಿಂದ ಗಾಢ ನಿದ್ರೆಗೆ ಅಡ್ಡಿಯಾಗಬಹುದು.
These are the 4 fruits you should never eat before going to bed!

2. ಬಾಳೆಹಣ್ಣು

ಆಯುರ್ವೇದದ ಪ್ರಕಾರ, ಬಾಳೆಹಣ್ಣು ದೇಹದಲ್ಲಿ 'ಕಫ'ವನ್ನು ಹೆಚ್ಚಿಸುತ್ತದೆ. ರಾತ್ರಿ ಹೊತ್ತು ತಾಪಮಾನ ಕಡಿಮೆ ಇರುವುದರಿಂದ ಬಾಳೆಹಣ್ಣು ಸೇವಿಸಿದರೆ ಶೀತ, ಕೆಮ್ಮು ಮತ್ತು ಸೈನಸ್ ಸಮಸ್ಯೆಗಳು ಉಲ್ಬಣಿಸಬಹುದು. ಅದರಲ್ಲೂ ಅಸ್ತಮಾ ರೋಗಿಗಳು ರಾತ್ರಿ ಬಾಳೆಹಣ್ಣಿನಿಂದ ದೂರವಿರುವುದು ಕ್ಷೇಮ.
These are the 4 fruits you should never eat before going to bed!

3. ಹೆಚ್ಚು ಸಕ್ಕರೆ ಅಂಶವಿರುವ ಹಣ್ಣುಗಳು

ಈ ಹಣ್ಣುಗಳಲ್ಲಿ ಪ್ರಾಕೃತಿಕ ಸಕ್ಕರೆ ಹೆಚ್ಚಿರುತ್ತದೆ. ಮಲಗುವ ಮುನ್ನ ಇವುಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ದಿಢೀರನೆ ಏರಿಕೆಯಾಗುತ್ತದೆ. ಇದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ, ಇದು ಮಲಗಲು ಕಷ್ಟವಾಗುವಂತೆ ಮಾಡುತ್ತದೆ. ಮಧುಮೇಹಿಗಳಿಗಂತೂ ಇದು ಅಪಾಯಕಾರಿ.
These are the 4 fruits you should never eat before going to bed!

4. ನೀರಿನಾಂಶ ಹೆಚ್ಚಿರುವ ಹಣ್ಣುಗಳು

ಕಲ್ಲಂಗಡಿ ಹಣ್ಣಿನಲ್ಲಿ ಸುಮಾರು 90% ನೀರಿರುತ್ತದೆ. ರಾತ್ರಿ ಇದನ್ನು ತಿಂದರೆ ಪದೇ ಪದೇ ಮೂತ್ರವಿಸರ್ಜನೆಗೆ ಏಳಬೇಕಾಗಬಹುದು. ಇದು ನಿಮ್ಮ ನಿದ್ರೆಯ ಚಕ್ರವನ್ನು ಹಾಳುಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net