Divorce : ಮದುವೆ ಎನ್ನುವುದು ಕೇವಲ ಎರಡು ಜೀವಗಳ ಮಿಲನವಲ್ಲ. ಮದುವೆ ಎನ್ನುವುದು ಕೇವಲ ಒಂದು ಕಾರ್ಯಕ್ರಮವಲ್ಲ. ಮದುವೆಯ ಪ್ರತಿಯೊಂದು ಶಾಸ್ತ್ರಕ್ಕೂ ತನ್ನದೇ ಆದ ಅರ್ಥ ಮತ್ತು ಮೌಲ್ಯವಿದೆ.
1. ಸಂವಹನದ ಕೊರತೆ
ಸಂಬಂಧದಲ್ಲಿ ಮಾತೇ ಮಾಣಿಕ್ಯವಾಗಿರುತ್ತದೆ. ಆದರೆ ದಂಪತಿಗಳು ಪರಸ್ಪರ ಮಾತನ್ನೇ ಆಡುವುದಿಲ್ಲ ಎನ್ನುವುದು ವಿಚ್ಛೇದನಕ್ಕೆ ಪ್ರಮುಖ ಕಾರಣಗಳಲ್ಲೊಂದು.
2. ಆರ್ಥಿಕ ಸಮಸ್ಯೆ
ಸ್ಥಿರವಾದ ಆರ್ಥಿಕತೆ ದಾಂಪತ್ಯಕ್ಕೆ ದೊಡ್ಡ ಆಧಾರ ಕಂಬವಿದ್ದಂತೆ. ಆದರೆ ಜೀವನದಲ್ಲಿ ಮೀತಿಮಿರಿದ ಸಾಲ, ದುಂದು ವೆಚ್ಚ, ಆದಾಯದ ಕೊರತೆ ಮತ್ತು ಹಣದ ಹೂಡಕೆಯಲ್ಲಿ ಪರಸ್ಪರರಲ್ಲಿ ಮನಸ್ತಾಪ ಉಂಟಾಗುತ್ತದೆ.
3. ನಂಬಿಕೆ ಕೊರತೆ
ದಾಂಪತ್ಯ ಎಂಬ ಬಂಡಿ ಸರಾಗವಾಗಿ ಸಾಗಬೇಕೆಂದರೆ ಅಲ್ಲಿ ನಂಬಿಕೆ ಎನ್ನುವುದು ಬಹಮುಖ್ಯವಾಗಿರುತ್ತದೆ. ಪರಸ್ಪರರ ಮೇಲೆ ನಂಬಿಕೆಯೇ ಇಲ್ಲವಾದರೆ ಅಂತಹ ಸಂಬಂಧವನ್ನು ಸರಿಮಾಡಲು ಸಾಧ್ಯವಾಗುವುದಿಲ್ಲ.
4. ಅನೈತಿಕ ಸಂಬಂಧ
ಬಹುತೇಕ ದಾಂಪತ್ಯಗಳು ವಿಚ್ಛೇದನ ಪಡೆಯಲು ಮೂಲ ಕಾರಣವೇ ಈ ಅನೈತಿಕ ಸಂಬಂಧ. ಪ್ರಪಂಚದ ಯಾವ ಹೆಣ್ಣು ತನ್ನ ಗಂಡನನ್ನು ಇನ್ನೊಬ್ಬ ಹೆಣ್ಣಿನೊಂದಿಗೆ ಹಂಚಿಕೊಳ್ಳಲು ಒಪ್ಪುವುದಿಲ್ಲ.
5. ಕುಟುಂಬದ ಹಸ್ತಕ್ಷೇಪ
ದಂಪತಿಗಳ ಪ್ರತಿಯೊಂದು ನಿರ್ಧಾರದ ಮೇಲೆ ಅತ್ತೆ-ಮಾವ, ಸಂಬಂಧಿಕರ ಅಥವಾ ಸ್ನೇಹಿತರ ಅತಿಯಾದ ಹಸ್ತಕ್ಷೇಪವು, ಬಾಳಿ ಬದುಕಬೇಕಾದ ದಂಪತಿಗಳ ಜೀವನವನ್ನು ಖಂಡಿತವಾಗಿ ಹಾಳುಗೆಡುವುತ್ತದೆ.
6. ಲೈಂಗಿಕ ಜೀವನದ ಅಸಮಾಧಾನ
ಶಾರೀರಿಕ ಆಪ್ತತೆ ದಾಂಪತ್ಯದ ಮಹತ್ವದ ಭಾಗ. ಆಸಕ್ತಿ ಕೊರತೆ, ಆರೋಗ್ಯ ಸಮಸ್ಯೆಗಳು, ಬಯಕೆಗಳಲ್ಲಿ ವ್ಯತ್ಯಾಸ ಇವು ಜೋಡಿಗಳ ನಡುವೆ ಭಾವನಾತ್ಮಕ ಅಂತರವನ್ನೂ ಹೆಚ್ಚಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News