ಬೇಸಿಗೆಯ ಕಾಯಿಲೆಗಳಿಗೆ ಗುಡ್‌ಬೈ: ಮಕ್ಕಳನ್ನು ಕಾಪಾಡುತ್ತವೆ ಈ 5 ಸೂಪರ್‌ಫುಡ್ಸ್

ಬೇಸಿಗೆಯ ಕಾಯಿಲೆಗಳಿಗೆ ಗುಡ್‌ಬೈ: ಮಕ್ಕಳನ್ನು ಕಾಪಾಡುತ್ತವೆ ಈ 5 ಸೂಪರ್‌ಫುಡ್ಸ್
ಬೇಸಿಗೆಯ ಕಾಯಿಲೆಗಳಿಗೆ ಗುಡ್‌ಬೈ: ಮಕ್ಕಳನ್ನು ಕಾಪಾಡುತ್ತವೆ ಈ 5 ಸೂಪರ್‌ಫುಡ್ಸ್
Published on
Goodbye to summer illnesses: These 5 superfoods will protect children

ಬೇಸಿಗೆಯ ಕಾಯಿಲೆಗಳಿಗೆ ಗುಡ್‌ಬೈ: ಮಕ್ಕಳನ್ನು ಕಾಪಾಡುತ್ತವೆ ಈ 5 ಸೂಪರ್‌ಫುಡ್ಸ್

ಬೆಂಗಳೂರು: ರಾಜ್ಯಾದ್ಯಂತ ತಾಪಮಾನ ಏರುತ್ತಿದ್ದಂತೆ ಮಕ್ಕಳಲ್ಲಿ ಸುಸ್ತು, ವಾಂತಿ, ಭೇದಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಆಗುವ ಲಕ್ಷಣಗಳು ಕಂಡುಬರುತ್ತಿವೆ. ಬಿಸಿಲಿನ ಬೇಗೆಯಿಂದ ಮಕ್ಕಳನ್ನು ರಕ್ಷಿಸಲು ಮತ್ತು ಅವರ ದೇಹದ ಆಂತರಿಕ ಶಕ್ತಿಯನ್ನು ಹೆಚ್ಚಿಸಲು ಪೋಷಕರು ಕೇವಲ ಐಸ್ ಕ್ರೀಮ್ ಅಥವಾ ತಂಪು ಪಾನೀಯಗಳ ಮೊರೆ ಹೋಗುತ್ತಾರೆ.
Goodbye to summer illnesses: These 5 superfoods will protect children

1. ಮೊಸರು ಮತ್ತು ಮಜ್ಜಿಗೆ

ಬೇಸಿಗೆಯಲ್ಲಿ ಮಕ್ಕಳ ಜೀರ್ಣಕ್ರಿಯೆ ಸುಗಮವಾಗಿರಲು ಮೊಸರು ಅತ್ಯುತ್ತಮ. ಇದರಲ್ಲಿರುವ ಪ್ರೋಬಯಾಟಿಕ್ ಅಂಶಗಳು ಹೊಟ್ಟೆಯ ಆರೋಗ್ಯವನ್ನು ಕಾಪಾಡುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಧ್ಯಾಹ್ನದ ಊಟದಲ್ಲಿ ಉಪ್ಪು ಮತ್ತು ಜೀರಿಗೆ ಪುಡಿ ಬೆರೆಸಿದ ಮಜ್ಜಿಗೆ ನೀಡುವುದು ಮಗುವಿನ ದೇಹವನ್ನು ತಂಪಾಗಿರಿಸುತ್ತದೆ.
Goodbye to summer illnesses: These 5 superfoods will protect children

2. ನೀರು ತುಂಬಿದ ಹಣ್ಣುಗಳು

ಕೇವಲ ನೀರು ಕುಡಿಯಲು ಮಕ್ಕಳು ಹಠ ಮಾಡಬಹುದು. ಅಂತಹ ಸಂದರ್ಭದಲ್ಲಿ ಕಲ್ಲಂಗಡಿ, ಕರ್ಬೂಜ, ಕಿತ್ತಳೆ ಮತ್ತು ದ್ರಾಕ್ಷಿ ಹಣ್ಣುಗಳನ್ನು ನೀಡಿ. ಇವುಗಳಲ್ಲಿ ಶೇ. 90ರಷ್ಟು ನೀರಿನಾಂಶವಿರುವುದಲ್ಲದೆ, ವಿಟಮಿನ್ ಸಿ ಹೇರಳವಾಗಿದ್ದು ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.
Goodbye to summer illnesses: These 5 superfoods will protect children

3. ಎಳನೀರು

ಮಕ್ಕಳು ಆಟವಾಡಿ ಬೆವರುವಾಗ ದೇಹದಿಂದ ಸಕ್ಕರೆ ಮತ್ತು ಲವಣಾಂಶಗಳು ಹೊರಹೋಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಎನರ್ಜಿ ಡ್ರಿಂಕ್ಸ್‌ಗಳ ಬದಲು ಎಳನೀರು ನೀಡುವುದು ಅತ್ಯಂತ ಸುರಕ್ಷಿತ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮಕ್ಕಳ ಮೆದುಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಪೂರಕ.
Goodbye to summer illnesses: These 5 superfoods will protect children

4. ಸೌತೆಕಾಯಿ ಮತ್ತು ಹಸಿರು ತರಕಾರಿಗಳು

ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಮಕ್ಕಳಿಗೆ ನೀಡಿ. ಇದು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಜೊತೆಗೆ ಪಾಲಕ್ ಮತ್ತು ಇತರ ಸೊಪ್ಪುಗಳನ್ನು ಸೂಪ್ ರೂಪದಲ್ಲಿ ನೀಡಿದರೆ ಅದರಲ್ಲಿರುವ ಕಬ್ಬಿಣಾಂಶ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
Goodbye to summer illnesses: These 5 superfoods will protect children

5. ನೆನೆಸಿದ ಒಣಹಣ್ಣುಗಳು

ಬೇಸಿಗೆಯಲ್ಲಿ ನೇರವಾಗಿ ಡ್ರೈ ಫ್ರೂಟ್ಸ್ ತಿಂದರೆ ದೇಹದಲ್ಲಿ ಉಷ್ಣತೆ ಹೆಚ್ಚಬಹುದು. ಆದ್ದರಿಂದ ಬಾದಾಮಿ ಮತ್ತು ವಾಲ್‌ನಟ್ಸ್ ಅನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಮಗುವಿಗೆ ತಿನ್ನಿಸಿ. ಇವುಗಳಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್ ಮಕ್ಕಳ ನೆನಪಿನ ಶಕ್ತಿ ಮತ್ತು ದೈಹಿಕ ಶಕ್ತಿಗೆ ಸಹಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net