ಮೂಳೆಗಳು ಉಕ್ಕಿನಂತಾಗಲು ಈ 5 ಆಹಾರ ಸೇವಿಸಿ!

ಮೂಳೆಗಳು ಉಕ್ಕಿನಂತಾಗಲು ಈ 5 ಆಹಾರ ಸೇವಿಸಿ!
ಮೂಳೆಗಳು ಉಕ್ಕಿನಂತಾಗಲು ಈ 5 ಆಹಾರ ಸೇವಿಸಿ!
Published on
Eat these 5 foods to make your bones like steel!

ಮೂಳೆಗಳು ಉಕ್ಕಿನಂತಾಗಲು ಈ 5 ಆಹಾರ ಸೇವಿಸಿ!

ಬೆಂಗಳೂರು: ಆರೋಗ್ಯವೇ ಭಾಗ್ಯ ಎಂಬ ಮಾತು ಹಳೆಯದಾದರೂ, ಇಂದಿನ ಧಾವಂತದ ಬದುಕಿನಲ್ಲಿ ನಮಗೆ ಅರಿವಿಲ್ಲದೆಯೇ ನಮ್ಮ ದೇಹದ ಭದ್ರಬುನಾದಿಯಾದ ಮೂಳೆಗಳು ಸವೆಯುತ್ತಿವೆ. ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ, ಭಾರತದಲ್ಲಿ ಪ್ರತಿ ಐವರಲ್ಲಿ ಒಬ್ಬರು ಮೂಳೆ ಸಾಂದ್ರತೆಯ ಕೊರತೆಯಿಂದ ಬಳಲುತ್ತಿದ್ದಾರೆ.
Eat these 5 foods to make your bones like steel!

1. ರಾಗಿ

ಸಿರಿಧಾನ್ಯಗಳಲ್ಲಿ ರಾಗಿಗೆ ಮೊದಲ ಸ್ಥಾನ. ಇದರಲ್ಲಿ ಅಕ್ಕಿ ಅಥವಾ ಗೋಧಿಗಿಂತ ಹತ್ತು ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. 100 ಗ್ರಾಂ ರಾಗಿಯಲ್ಲಿ ಸುಮಾರು 344 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ರಾಗಿ ಮುದ್ದೆ ಅಥವಾ ರಾಗಿ ಅಂಬಲಿ ಸೇವನೆಯು ವಯಸ್ಸಾದ ಮೇಲೆ ಬರುವ ಮೂಳೆ ನೋವನ್ನು ತಡೆಯಲು ರಾಮಬಾಣ.
Eat these 5 foods to make your bones like steel!

2. ಹಾಲು ಮತ್ತು ಮೊಸರು

ಕ್ಯಾಲ್ಸಿಯಂ ಅಂದ ಕೂಡಲೇ ನೆನಪಾಗುವುದು ಹಾಲು. ಒಂದು ಲೋಟ ಹಾಲಿನಲ್ಲಿ ಸುಮಾರು 300 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಹಾಲಿನ ಉತ್ಪನ್ನಗಳಾದ ಪನೀರ್ ಮತ್ತು ಚೀಸ್ ಕೂಡ ಅತ್ಯುತ್ತಮ ಮೂಲಗಳು. ಹಾಲನ್ನು ಜೀರ್ಣಿಸಿಕೊಳ್ಳಲು ಕಷ್ಟಪಡುವವರು ಮೊಸರನ್ನು ಸೇವಿಸಬಹುದು, ಇದು ಪ್ರೊಬಯಾಟಿಕ್ ಜೊತೆಗೆ ಮೂಳೆಗಳಿಗೂ ಶಕ್ತಿ ನೀಡುತ್ತದೆ.
Eat these 5 foods to make your bones like steel!

3. ಹಸಿರು ಎಲೆ ತರಕಾರಿಗಳು

ಪಾಲಕ್, ದಂಟಿನ ಸೊಪ್ಪು ಮತ್ತು ಮೆಂತೆ ಸೊಪ್ಪು ಕ್ಯಾಲ್ಸಿಯಂನ ಗಣಿಗಳಿದ್ದಂತೆ. ವಿಶೇಷವಾಗಿ ನುಗ್ಗೆ ಸೊಪ್ಪಿನಲ್ಲಿ ಹಾಲಿನ ಗಿಂತ ಹೆಚ್ಚಿನ ಕ್ಯಾಲ್ಸಿಯಂ ಇದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ವಾರದಲ್ಲಿ ಕನಿಷ್ಠ ಮೂರು ಬಾರಿ ಸೊಪ್ಪನ್ನು ಸೇವಿಸುವುದು ಕಡ್ಡಾಯ.
Eat these 5 foods to make your bones like steel!

4. ಬೀಜಗಳು ಮತ್ತು ಒಣ ಹಣ್ಣುಗಳು

ಒಂದು ಚಮಚ ಎಳ್ಳಿನಲ್ಲಿ ಒಂದು ಲೋಟ ಹಾಲಿನಷ್ಟೇ ಕ್ಯಾಲ್ಸಿಯಂ ಇರುತ್ತದೆ ಎಂದರೆ ನೀವು ನಂಬಲೇಬೇಕು. ಅಲ್ಲದೆ, ಬಾದಾಮಿಯಲ್ಲಿ ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಇ ಕೂಡ ಇರುತ್ತದೆ, ಇದು ಮೂಳೆಗಳ ಸವೆತವನ್ನು ತಡೆಯುತ್ತದೆ.
Eat these 5 foods to make your bones like steel!

5. ಅಂಜೂರ

ಒಣ ಅಂಜೂರದ ಹಣ್ಣುಗಳಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಹೇರಳವಾಗಿದೆ. ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವುದಲ್ಲದೆ, ದೇಹದ ಶಕ್ತಿಯನ್ನು ವೃದ್ಧಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net