ಜಗತ್ತಿನಲ್ಲಿ ನಡೆದ 7 ಭೀಕರ ಯುದ್ಧಗಳು

ಜಗತ್ತಿನಲ್ಲಿ ನಡೆದ 7 ಭೀಕರ ಯುದ್ಧಗಳು
ಜಗತ್ತಿನಲ್ಲಿ ನಡೆದ 7 ಭೀಕರ ಯುದ್ಧಗಳು
Published on
7 most terrible wars in the world

ಜಗತ್ತಿನಲ್ಲಿ ನಡೆದ 7 ಭೀಕರ ಯುದ್ಧಗಳು

ನಾಗರಿಕತೆಯ ಬೆಳವಣಿಗೆಯ ಜೊತೆಗೆ ಅಧಿಕಾರ, ಭೂಮಿ ಮತ್ತು ಅಹಂಕಾರಕ್ಕಾಗಿ ನಡೆದ ಯುದ್ಧಗಳು ಕೋಟ್ಯಂತರ ಜೀವಗಳನ್ನು ಬಲಿ ಪಡೆದಿವೆ. ಇಂದಿಗೂ ಆ ಯುದ್ಧಗಳ ನೆನಪು ಮನುಕುಲದ ಆತ್ಮಸಾಕ್ಷಿಯನ್ನು ಚುಚ್ಚುತ್ತಿದೆ. ವಿಶ್ವವು ಕಂಡ ಅತ್ಯಂತ ಭೀಕರ 7 ಯುದ್ಧಗಳ ಸಂಪೂರ್ಣ ಚಿತ್ರಣ ಇಲ್ಲಿದೆ.
7 most terrible wars in the world

1. ಎರಡನೇ ಮಹಾಯುದ್ಧ (1939-1945)

ಇದು ಮಾನವ ಇತಿಹಾಸದ ಅತ್ಯಂತ ವಿನಾಶಕಾರಿ ಯುದ್ಧವಾಗಿದ್ದು. ಅಡಾಲ್ಫ್ ಹಿಟ್ಲರ್‌ನ ನಾಜಿ ಸಿದ್ಧಾಂತ ಮತ್ತು ಜಪಾನ್‌ನ ಸಾಮ್ರಾಜ್ಯಶಾಹಿ ನೀತಿಯಿಂದಾಗಿ ಇಡೀ ಜಗತ್ತು ಬೆಂಕಿಯ ಉಂಡೆಯಾಯಿತು. ಇದರಲ್ಲಿ ಸುಮಾರು 7 ಕೋಟಿಯಿಂದ 8.5 ಕೋಟಿ ಜನರು ಮೃತಪಟ್ಟರು.
7 most terrible wars in the world

2. ಮೊದಲನೇ ಮಹಾಯುದ್ಧ (1914-1918)

ಗ್ರೇಟ್ ವಾರ್ ಎಂದು ಕರೆಯಲ್ಪಡುವ ಈ ಯುದ್ಧವು ಯುರೋಪ್‌ನ ಸಾಮ್ರಾಜ್ಯಗಳ ಪತನಕ್ಕೆ ಕಾರಣವಾಯಿತು. ಕಂದಕ ಯುದ್ಧಗಳು ಮತ್ತು ಮೊದಲ ಬಾರಿಗೆ ರಾಸಾಯನಿಕ ಅನಿಲಗಳ ಬಳಕೆ ಈ ಯುದ್ಧದ ಭೀಕರತೆಯನ್ನು ಹೆಚ್ಚಿಸಿದವು. ಅಲ್ಲದೆ, ಈ ಯುದ್ದದಲ್ಲಿ ಅಂದಾಜು 2 ಕೋಟಿ ಜನರು ಸಾವನ್ನಪ್ಪಿದರು ಮತ್ತು ಅಷ್ಟೇ ಸಂಖ್ಯೆಯ ಜನರು ಗಾಯಾಳುಗಳಾದರು.
7 most terrible wars in the world

3. ಮಂಗೋಲ್ ಆಕ್ರಮಣಗಳು (1206- 1368)

ಏಷ್ಯಾದಿಂದ ಯುರೋಪ್‌ವರೆಗೂ ಹಬ್ಬಿದ್ದ ಮಂಗೋಲ್ ಸಾಮ್ರಾಜ್ಯದ ವಿಸ್ತರಣೆಯು ಇತಿಹಾಸದ ಅತ್ಯಂತ ಕ್ರೂರ ಅಧ್ಯಾಯಗಳಲ್ಲಿ ಒಂದಾಗಿದೆ. ಗೆಂಘಿಸ್ ಖಾನ್ ಮತ್ತು ಅವನ ಉತ್ತರಾಧಿಕಾರಿಗಳು ಹೋದಲ್ಲೆಲ್ಲಾ ನಗರಗಳನ್ನು ಸುಟ್ಟು ಹಾಕಿದರು. ಇದರಲ್ಲಿ ಸುಮಾರು 4 ಕೋಟಿ ಜನರು ಈ ಆಕ್ರಮಣಗಳಲ್ಲಿ ಪ್ರಾಣ ಕಳೆದುಕೊಂಡರು. ಅಂದಿನ ಕಾಲದ ವಿಶ್ವದ ಜನಸಂಖ್ಯೆಯ ಶೇ. 10ರಷ್ಟು ಜನರು ಬಲಿಯಾದರು.
7 most terrible wars in the world

4. ಟೈಪಿಂಗ್ ದಂಗೆ (1850-1864)

ಚೀನಾದ ಕ್ವಿಂಗ್ ರಾಜವಂಶದ ವಿರುದ್ಧ ನಡೆದ ಈ ಧಾರ್ಮಿಕ ಮತ್ತು ರಾಜಕೀಯ ದಂಗೆಯು ವಿಶ್ವದ ಅತ್ಯಂತ ಭೀಕರ ಅಂತರ್ಯುದ್ಧಗಳಲ್ಲಿ ಒಂದಾಗಿದೆ. ಹಸಿವು ಮತ್ತು ರೋಗಗಳು ಸಾವಿನ ಸಂಖ್ಯೆಯನ್ನು ಹೆಚ್ಚಿಸಿದವು. ಸುಮಾರು 2 ಕೋಟಿಯಿಂದ 3 ಕೋಟಿ ಜನರ ಸಾವು ಸಂಭವಿಸಿತು.
7 most terrible wars in the world

5. ಅನ್ ಲುಶನ್ ದಂಗೆ (755-763)

ಇದು ಚೀನಾದ ಇತಿಹಾಸದಲ್ಲಿ ನಡೆದ ಮತ್ತೊಂದು ಭೀಕರ ಸಂಘರ್ಷ. ಜನರಲ್ ಅನ್ ಲುಶನ್ ಚಕ್ರವರ್ತಿಯ ವಿರುದ್ಧ ಬಂಡಾಯ ಎದ್ದ ಪರಿಣಾಮವಾಗಿ ಇಡೀ ದೇಶವು ಅರಾಜಕತೆಗೆ ತಳ್ಳಲ್ಪಟ್ಟಿತು. ಅಂದಿನ ಜನಗಣತಿಯ ಪ್ರಕಾರ ಸಾವು-ನೋವುಗಳು 3.6 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ.
7 most terrible wars in the world

6. ಅಮೆರಿಕದ ಅಂತರ್ಯುದ್ಧ (1861-1865)

ಅಮೆರಿಕದ ಒಕ್ಕೂಟ ಮತ್ತು ಪ್ರತ್ಯೇಕತಾವಾದಿ ದಕ್ಷಿಣ ರಾಜ್ಯಗಳ ನಡುವೆ ನಡೆದ ಈ ಯುದ್ಧವು ಗುಲಾಮಗಿರಿಯ ಅಂತ್ಯಕ್ಕೆ ನಾಂದಿ ಹಾಡಿತು. ಅಬ್ರಹಾಂ ಲಿಂಕನ್ ಅವರ ನಾಯಕತ್ವದಲ್ಲಿ ನಡೆದ ಈ ಯುದ್ಧವು ಅಮೆರಿಕದ ಇತಿಹಾಸವನ್ನೇ ಬದಲಿಸಿತು. ಇದರಲ್ಲಿ ಸುಮಾರು 6.2 ಲಕ್ಷ ಸೈನಿಕರು ಮೃತಪಟ್ಟರು.
7 most terrible wars in the world

7. 30 ವರ್ಷಗಳ ಯುದ್ಧ (1618-1648)

ಯುರೋಪ್‌ನಲ್ಲಿ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಕ್ರೈಸ್ತರ ನಡುವೆ ನಡೆದ ಈ ಯುದ್ಧವು ನಂತರ ರಾಜಕೀಯ ಯುದ್ಧವಾಗಿ ಬದಲಾಯಿತು. ಜರ್ಮನಿಯ ಬಹುತೇಕ ಭಾಗಗಳು ಸ್ಮಶಾನದಂತಾಗಿದ್ದವು. ಈ ಗಲಭೆಗಳಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ಜನರು ಹಸಿವು ಮತ್ತು ಯುದ್ಧದಿಂದ ಸಾವನ್ನಪ್ಪಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net