

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ದೇವಳದ ಗಜರಾಣಿ ಯಶಸ್ವಿಗೆ ಮಹಾನವಮಿ ದಿನವಾದ ಶನಿವಾರ ಗಜಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಪುರೋಹಿತರು ವಿಧಿವಿಧಾನಗಳ ಮೂಲಕ ಪೂಜೆ ನಡೆಸಿದರು.
ಮಧ್ಯಾಹ್ನದ ಮಹಾಪೂಜೆಯ ಬಳಿಕ ಶ್ರೀ ದೇವಳದ ಮುಂಭಾಗಕ್ಕೆ ಆಗಮಿಸಿದ ಯಶಸ್ವಿಗೆ ಪುರೋಹಿತರು ಪುಷ್ಪಮಾಲೆ, ಹಣ್ಣುಹಂಪಲು, ತೆಂಗಿನಕಾಯಿ, ಅವಲಕ್ಕಿ, ಹೊದ್ಲು, ಬೆಲ್ಲ ಇತ್ಯಾದಿ ತಿನಿಸುಗಳನ್ನು ಸಮರ್ಪಿಸಿ ಪೂಜೆ ನೆರವೇರಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸೇರಿದಂತೆ ದೇವಳದ ಸಿಬ್ಬಂದಿ ಮತ್ತು ಭಕ್ತರು ಉಪಸ್ಥಿತರಿದ್ದರು. ದೇವಳದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಗಜಲಕ್ಷ್ಮಿ ಯಶಸ್ವಿಗೆ ಹಣ್ಣು-ಹಂಪಲು, ಬೆಲ್ಲ, ಅವಲಕ್ಕಿ ಇತ್ಯಾದಿ ಸಂಪ್ರದಾಯ ಪ್ರಕಾರ ಉಣಬಡಿಸಿದರು.