ತಂಡದಿಂದ ಕೈಬಿಟ್ಟಿದ್ದಕ್ಕೆ ಬೇಸರವಾಗಿತ್ತು

GR VISHWANATH
Published on

ಬೆಂಗಳೂರು: 1982-83ನೇ ಸಾಲಿನಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರದಿದ್ದಕ್ಕೆ ತಂಡದಿಂದ ಕೈಬಿಟ್ಟಿದ್ದರಿಂದ ಬೇಸರಗೊಂಡಿದ್ದೆ ಎಂದು ದಿಗ್ಗಜ ಬ್ಯಾಟ್ಸ್​ಮನ್ ಜಿಆರ್ ವಿಶ್ವನಾಥ್ ಹೇಳಿಕೊಂಡಿದ್ದಾರೆ.

70ರ ದಶಕದಲ್ಲಿ ಭಾರತದ ಸ್ಟೈಲಿಶ್ ಬ್ಯಾಟ್ಸ್​ಮನ್ ಆಗಿದ್ದ ಜಿಆರ್​ಜಿ ಆಕರ್ಷಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದರು. 1983ರಲ್ಲಿ ಪಾಕ್ ಪ್ರವಾಸದ ಬಳಿಕ ಜಿಆರ್ ವಿಶ್ವನಾಥ್ ಅವರನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿತು. ಪಾಕ್​ನಲ್ಲಿ 6 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜಿಆರ್​ವಿ ನಿರೀಕ್ಷಿತ ಮಟ್ಟದಲ್ಲಿ ರನ್​ಗಳಿಸದ ಪರಿಣಾಮ ಅವರನ್ನು ಮುಂದಿನ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಹಾಗೂ 1983ರ ಏಕದಿನ ವಿಶ್ವಕಪ್ ತಂಡದಿಂದ ಕೈಬಿಡಲಾಯಿತು.

ಕೆಟ್ಟ ತೀರ್ಪಿಗೂ ಬಲಿಯಾದೆ. ಇದು ಪಂದ್ಯದ ಭಾಗವಾಗಿತ್ತು. ಈ ಎರಡು ಇನಿಂಗ್ಸ್​ಗಳಲ್ಲಿ ರನ್ ಗಳಿಸಿದ್ದರೆ ನನ್ನನ್ನು ಕೈಬಿಡುತ್ತಿರಲಿಲ್ಲ’ ಎಂದು 71 ವರ್ಷದ ವಿಶ್ವನಾಥ್ ಹೇಳಿದ್ದಾರೆ. ಕರ್ನಾಟಕದಿಂದ ರಾಷ್ಟ್ರೀಯ ತಂಡ ಪ್ರತಿನಿಧಿಸಿದ ಕರ್ನಾಟಕದ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಕರ್ನಾಟಕ ತಂಡದಲ್ಲಿದ್ದಾಗ ಇಎಎಸ್ ಪ್ರಸನ್ನ ಹಾಗೂ ರಾಷ್ಟ್ರೀಯ ತಂಡದಲ್ಲಿದ್ದಾಗ ಮನ್ಸೂರ್ ಅಲಿಖಾನ್ ಪಟೌಡಿ ನನ್ನನ್ನು ಗುರಿತಿಸಿದರು. ಇವರ ನಾಯಕತ್ವದಡಿಯಲ್ಲೇ ನಾನು ಬೆಳಕಿಗೆ ಬಂದೆ ಎಂದು ಸ್ಮರಿಸುತ್ತಾರೆ. 91 ಟೆಸ್ಟ್ ಪಂದ್ಯಗಳಿಂದ 6080 ರನ್ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net