ಕಳಿಯೂರು ಶಾಲೆಗೆ ಪೀಠೋಪಕರಣ ಕೊಡುಗೆ

2
Published on

ಮಂಜೇಶ್ವರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಜ್ಞಾನದೀಪ ಯೋಜನೆ ವತಿಯಿಂದ ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಮಂಜೂರಾದ ಪೀಠೋಪಕರಣಗಳ ವಿತರಣಾ ಕಾರ್ಯಕ್ರಮ ಶುಕ್ರವಾರ ಶಾಲೆಯಲ್ಲಿ ನಡೆಯಿತು. ಯೋಜನಾಧಿಕಾರಿ ಶಶಿಕಲಾ ಸುವರ್ಣ ಉದ್ಘಾಟಿಸಿದರು.

ಶಾಲಾ ಸಂಚಾಲಕ ಫಾದರ್ ಬೇಸಿಲ್ ವಾಸ್ ಅಧ್ಯಕ್ಷತೆ ವಹಿಸಿದ್ದರು. ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ನಿರ್ದೇಶಕ ಕೃಷ್ಣಪ್ಪ, ಪದಾಧಿಕಾರಿ ದಿನೇಶ್, ಹರ್ಷಾದ್ ವರ್ಕಾಡಿ, ಪಿಟಿಎ ಅಧ್ಯಕ್ಷ ಸೀತಾರಾಮ ಬೇರಿಂಜ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಪುಷ್ಪಾವತಿ ಸ್ವಾಗತಿಸಿ, ಕ್ಲಾರಾ ಡಿಸೋಜ ವಂದಿಸಿದರು. ಭಗಿನಿ ಸೆವ್ರಿನ್ ಡಿಕುನ್ಹಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net