ಜನಪ್ರತಿನಿಧಿಗಳ ಸ್ವಚ್ಛತಾ ಕಾಳಜಿಗೆ ಶ್ಲಾಘನೆ

6
Published on

ಪುತ್ತೂರು ಗ್ರಾಮಾಂತರ: ಸ್ವಚ್ಛತೆ ಎಂಬುದು ಕೇವಲ ಭಾಷಣ, ಮಾತಿಗಷ್ಟೇ ಸೀಮಿತವಾಗಬಾರದು, ಅದು ನಮ್ಮ ಕರ್ತವ್ಯದಲ್ಲೂ ಇರಬೇಕು. ಕಾಯಕದ ಪರಿಕಲ್ಪನೆಯ ಸ್ವಚ್ಛತೆ ನಮ್ಮಲ್ಲಿ ಬರಬೇಕು ಎಂಬ ನಿಟ್ಟಿನಲ್ಲಿ ಒಳಮೊಗ್ರು ಗ್ರಾಪಂನಲ್ಲಿ ಜನಪ್ರತಿನಿಧಿಗಳು ಸ್ವಚ್ಛತೆಯ ವಿಷಯದಲ್ಲಿ ಕಾಳಜಿ ವಹಿಸಿ ಕೆಲಸ ಮಾಡುವ ಮೂಲಕ ಗ್ರಾಮಸ್ಥರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಒಳೊಗ್ರು ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ವಾರ್ಡ್ ಸದಸ್ಯೆ ರೇಖಾ ಯತೀಶ್ ಅವರು ಸ್ವತಃ ತಾವೇ ಸ್ವಚ್ಛತಾ ಕೆಲಸದಲ್ಲಿ ಕೈ ಜೋಡಿಸುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ.

ಕೈಕಾರದಲ್ಲಿರುವ ಸ್ವಚ್ಛ ಸಂಕೀರ್ಣದ ಹೊರಭಾಗದಲ್ಲಿ ರಾಶಿ ಹಾಕಲಾಗಿದ್ದ ಒಣ ಕಸ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಒದ್ದೆಯಾಗಿತ್ತು. ಇದನ್ನು ಗಮನಿಸಿದ ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸ್ವಚ್ಛತಾ ಸೇನಾನಿಗಳೊಂದಿಗೆ ಮಾತುಕತೆ ನಡೆಸಿ, ಅಲ್ಲಿದ್ದ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ತುಂಬಿಸುವ ಮೂಲಕ ಘಟಕದ ಸುತ್ತುತ್ತಲಿನ ಭಾಗದ ಸ್ವಚ್ಛತೆ ಮಾಡುವ ಕಾರ್ಯ ನಡೆಸಿದ್ದಾರೆ. ಈ ಕಾರ್ಯಕ್ಕೆ ಅಲ್ಲಿನ ವಾರ್ಡ್ ಸದಸ್ಯೆ ರೇಖಾ ಯತೀಶ್ ಕೈ ಜೋಡಿಸಿದ್ದಾರೆ. ಗ್ರಾಪಂ ಸ್ವಚ್ಛತಾ ಸೇನಾನಿಗಳಾದ ಕಮಲಾಕ್ಷಿ, ಕವಿತಾ, ಕವಿತಾ ಕುಂಬ್ರ ಮತ್ತು ಎಂಬಿಕೆ ಚಂದ್ರಿಕಾ ಅವರು ಸಹಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net