

ಬೆಂಗಳೂರು: ಮೊನ್ನೆ ಬೆಳಗ್ಗೆ, ಬ್ಯಾಂಕಾಕ್ನಲ್ಲಿದ್ದ ಸ್ಪಂದನಾ ಹೃದಯಾಘಾತದಿಂದಾಗಿ ಮೃತಪಟ್ಟಿದ್ದು ಇಡೀ ಸ್ಯಾಂಡಲ್ವುಡ್ಗೆ ಆಘಾತಕಾರಿ ಸಂಗತಿಯಾಗಿದೆ. ಇದು ದೊಡ್ಮನೆಯಲ್ಲಿ ಎರಡನೇ ಸಾವಾಗಿದ್ದು, ಅಪ್ಪು ಸಾವನ್ನು ಮರೆಯುವ ಮುನ್ನವೇ ಸ್ಪಂದನಾ ಮೃತಪಟ್ಟಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ.
ನಿನ್ನೆ ರಾತ್ರಿ ಸುಮಾರು 12.30 ವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪಂದನ ಮೃತದೇಹ ಹಸ್ತಾಂತರ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕುಟುಂಬಕ್ಕೆ ಸ್ಪಂದನ ಮೃತದೇಹ ಹಸ್ತಾಂತರ ಮಾಡಲಾಗಿದೆ. ಕಾರ್ಗೋ ಟರ್ಮಿನಲ್ನಿಂದ ಆಂಬ್ಯುಲೆನ್ಸ್ನಲ್ಲಿ ಸ್ಪಂದನ ಮೃತದೇಹವನ್ನು ಬೆಂಗಳೂರಿನತ್ತ ಕರೆತರಲಾಗಿದೆ.
ಬಿಕೆ ಶಿವರಾಮ್ ಮನೆಯಿಂದ ತೆರಳಿದ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ತೆರಳಿದರು. ತಮ್ಮ ಮುದ್ದಿನ ಸೊಸೆಯಗೆ ಕೊನೆಯ ಬಾರಿಗೆ ಒಮ್ಮೆ ವಿದಾಯ ಹೇಳಲು ಅತ್ತೆ ಜಯಮ್ಮ ಕೂಡ ಆಗಮಿಸಿದ್ದಾರೆ. ಇತ್ತೀಚೆಗೆ ಜಯಮ್ಮ ಕಾಲಿಗೆ ಪೆಟ್ಟಾಗಿ ಬೆಡ್ರೆಸ್ಟ್ನಲ್ಲಿದ್ದರು. ಈ ಕಾರಣದಿಂದಾಗಿ ವಿಜಯರಾಘವೇಂದ್ರ ಅವರ ತಾಯಿ ಜಯಮ್ಮ ಅವರನ್ನು ನಟ ಮುರಳಿ ಮನೆಯಿಂದ ಆಂಬುಲೆನ್ಸ್ ಮೂಲಕವೇ ಕರೆತರಲಾಯಿತು. ವೀಲ್ ಚೇರ್ನಲ್ಲಿದ್ದ ತಾಯಿಯನ್ನ ಮನೆ ಒಳಗೆ ಕರೆದೊಯ್ದ ಮುರುಳಿ, ವಿಜಯರಾಘವೇಂದ್ರ ಅಂತಿಮ ದರ್ಶನ ಮಾಡಿಸಿದ್ದಾರೆ.
ಬೆಳಗ್ಗೆ ಏಳರ ನಂತರ ಸ್ಪಂದನಾ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೆ ಮನೆ ಮುಂದೆ ಅಂತಿಮ ದರ್ಶನಕ್ಕೆ ಕುಟುಂಬ ವರ್ಗ ವ್ಯವಸ್ಥೆ ಮಾಡಿದ್ದು ಮನೆ ಅಂಗಳದಲ್ಲೇ ಆಪ್ತ ವಲಯದವರು ಅಂತಿಮದರ್ಶನ ಪಡೆದಿದ್ದಾರೆ. ಈಗಾಗಲೆ ಸ್ಪಂದನ ಕುಟುಂಬದ ಆಪ್ತ ವಲಯದವರು ಕೊನೆಯ ಬಾರಿಗೊಮ್ಮೆ ವಿದಾಯ ಹೇಳಿದ್ದಾರೆ.