ಫ್ರೆಂಡ್​ಷಿಪ್​ ಡೇ: ಕ್ಯಾನ್ಸರ್ ಬಂದಾಗ ಜೀವತುಂಬಿದರು...

mamata
Published on
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ...

ಖುಷಿಯಿಂದ ಜಿಗಿದಾಡುತ್ತಿದ್ದ ನನ್ನ ಜೀವನದ ಗಾಡಿಗೆ ಬ್ರೇಕ್ ಬಿದ್ದದ್ದು ನನಗೆ ಕ್ಯಾನ್ಸರ್ ಇರುವುದು ತಿಳಿದಾಗ. ಕ್ಯಾನ್ಸರ್​ಗೆ ಟ್ರೀಟ್​ವೆುಂಟ್ ಶುರುವಾದಾಗ ಅಚ್ಚುಮೆಚ್ಚಿನ ಸ್ನೇಹಿತೆಯರು ನನ್ನ ಕೈ ಬಿಡಲಿಲ್ಲ. ಯೋಗಕ್ಷೇಮವನ್ನು ನೋಡಿಕೊಂಡರು. ನನಗಾಗಿ ದೇವಾಲಯಗಳಲ್ಲಿ ಹರಕೆ ಹೊತ್ತರು. ಪ್ರತಿದಿನ ನನ್ನ ಬೇಕು ಬೇಡಗಳನ್ನು ನೋಡಿಕೊಂಡರು. ನನಗೆ ಬೇಸರವಾಗಬಾರದು ಎಂದು ಹರಟೆ ಹೊಡೆಯುವುದಕ್ಕಾಗಿಯೇ ಮನೆಗೆ ಬರುತ್ತಿದ್ದರು. ವಿನೋದಾ, ಲಲಿತಾ.. ಇನ್ನೂ ಬಹಳಷ್ಟು ಸ್ನೇಹಿತೆಯರು ನನ್ನನ್ನು ಐದು ತಿಂಗಳು ಆರೈಕೆ ಮಾಡಿದರು. ಇದರಿಂದಾಗಿ ಕ್ಯಾನ್ಸರನ್ನು ಒಂದು ರೀತಿ ಸೆಲೆಬ್ರೇಷನ್ ಮಾಡಿಕೊಂಡೆ. ಒಂದು ಕ್ಷಣ ಕೂಡ ನಾನು ಪೇಷೆಂಟ್ ಎಂಬ ಭಾವನೆ ಬರಗೊಡಲಿಲ್ಲ ನನ್ನೀ ಸ್ನೇಹಿತೆಯರು. ಇವರಿಂದಾಗಿಯೇ ನಿಗದಿತ ಅವಧಿಗಿಂತ ಮುಂಚೆ ಚೇತರಿಸಿಕೊಳ್ಳುತ್ತಿದ್ದೇನೆ. ಆ ಎಲ್ಲ ಸ್ನೇಹಿತೆಯರಿಗೆ ನನ್ನ ಅಕ್ಷರಾಂಜಲಿ.

| ಮಮತಾ ಅಡಕಳ್ಳಿ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net