ಫ್ರೆಂಡ್​ಷಿಪ್​ ಡೇ: ಪ್ರೀತಿಪಾತ್ರರೆಲ್ಲ ಕೈಬಿಟ್ಟು ಹೋದಾಗ...

maltesh
Published on
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ..

ಪಿಯುಸಿಯಲ್ಲಿದ್ದಾಗಲೇ ಮೊದಲ ಪ್ರೀತಿ ಭಗ್ನವಾಗಿ ಕುಗ್ಗಿ ಹೋಗಿದ್ದೆ. ಕೆಲ ದಿನಗಳ ನಂತರ ಅವಳೂ ಮೃತಪಟ್ಟಾಗ ನೋವು ಸಹಿಸಿಕೊಳ್ಳಲು ಆಗಲಿಲ್ಲ. ಆ ನೋವನ್ನು ಮರೆಯುವ ಮುನ್ನವೇ ನನ್ನ ಪ್ರೀತಿಯ ಅಕ್ಕ ಕಾಲವಾದಳು. ಇದನ್ನು ಅರಗಿಸಿಕೊಳ್ಳುವಷ್ಟರಲ್ಲಿಯೇ ಡಿಗ್ರಿ ಕೊನೆಯ ವರ್ಷದಲ್ಲಿ ನನ್ನ ಅಪ್ಪ ತೀರಿಕೊಂಡರು. ಬದುಕು ಬರಡಾಗಿತ್ತು. ಕುಗ್ಗಿಹೋಗಿದ್ದೆ. ಜೀವನವೇ ಬೇಡ ಎನ್ನುವ ಪರಿಸ್ಥಿತಿ. ಆಗಲೇ ನನ್ನ ಜೀವನದಲ್ಲಿ ಎಂಟ್ರಿ ಕೊಟ್ಟವರು ನಾಲ್ವರು ಸ್ನೇಹಿತರು. ನನ್ನೆಲ್ಲಾ ನೋವುಗಳನ್ನು ಮರೆಸಿ, ನನಗೆ ನಗುವಿನ ಟಾನಿಕ್ ನೀಡಿ, ಜೀವನ ಉತ್ಸಾಹ ತುಂಬಿದರು. ಆತ್ಮೀಯರನ್ನೆಲ್ಲಾ ಕಳೆದುಕೊಂಡು ಹತಾಶನಾಗಿದ್ದ ನನಗೆ ಜೀವನದ ಬಗ್ಗೆ ತಿಳಿಹೇಳಿದವರು ಇವರೇ. ಈಗ ನಾವು ನಾವು ಐವರು ಸ್ನೇಹಿತರು, ಪಾಂಚಾಲಿಯಿಲ್ಲದ ಪಾಂಡವರು..!

ದೀಪಕ್ (ಧರ್ಮರಾಯ) ಶರತ್(ಭೀಮ) ಪ್ರವೀಣ(ನಕುಲ) ಹರೀಶ್(ಸಹದೇವ) ಹಾಗೂ ಮಧ್ಯಮ ಪಾಂಡವ ಮಾಲತೇಶ(ಅರ್ಜುನ)!

| ಮಾಲ್ತೇಶ್ ತತ್ತೂರ್ ಸೊರಬ ತಾಲ್ಲೂಕು, ಶಿವಮೊಗ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net