ಫ್ರೆಂಡ್​ಷಿಪ್​ ಡೇ: ಅಕ್ಕನ ಹುಡುಕಿಕೊಟ್ಟು ಸ್ನೇಹಿತನಾದ...

jujare
Published on
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ...

ಮಾನಸಿಕ ಸ್ಥಿಮಿತ ಕಳೆದುಕೊಂಡ ನಮ್ಮ ಅಕ್ಕ ಒಂದು ದಿನ ಎಲ್ಲಿಯೋ ಹೋಗಿಬಿಟ್ಟಳು. ಅಕ್ಕನನ್ನು ಹುಡುಕಲು ನಾನಾ ಕಡೆಗಳಲ್ಲಿ ಪೋಟೋ, ವಿವರ ಎಲ್ಲವನ್ನೂ ಹಾಕಲಾಯಿತು. ಆದರೆ ಅಕ್ಕನ ಸುಳಿವೇ ಇರಲಿಲ್ಲ. ಅದೇ ಸಮಯದಲ್ಲಿ ಸ್ನೇಹಿತನಾಗಿ ಬಂದವ ಆಟೋ ಚಾಲಕ. ಎಲ್ಲಿಯೋ ಸಿಕ್ಕ ಅಕ್ಕನನ್ನು ತನ್ನ ಆಟೋದಲ್ಲಿ ಕುಳ್ಳಿರಿಸಿಕೊಂಡು ನಮಗೆ ಫೋನ್ ಮಾಡಿದ. ಆತನ ಆಟೋದ ಮೇಲೆ ‘ಫ್ರೆಂಡ್ಸ್ ಅಂದ್ರೆ ಜೀವ’ ಎಂದು ಇತ್ತು. ಆಟೋ ಡ್ರೖೆವರ್ ನಿಜವಾಗಿಯೂ ನನ್ನ ಜೀವನದಲ್ಲಿ ಸ್ನೇಹಿತನಾಗಿಬಿಟ್ಟ. ಇಂದು ನಮ್ಮ ಅಕ್ಕ ಪೂರ್ಣ ಗುಣಮುಖಳಾಗಿ ಆರೋಗ್ಯದಿಂದ ಇದ್ದರೆ ಅದಕ್ಕೆ ಕಾರಣ ಅವರೇ.

| ಜುಜಾರೆ ಎನ್. ಲಕ್ಷ್ಮಣ ರಾವ್ ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net