ಫ್ರೆಂಡ್​ಷಿಪ್​ ಡೇ: ಆಪ್ತೆ ಅಲ್ಲದಿದ್ದರೂ ಬಂದು ಜೀವ ಉಳಿಸಿದ್ದಳು

chitralekha
Published on
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು ಮತ್ತು ಸೃಷ್ಟಿ ಜವಳಕರ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರೂ ಒಳ್ಳೆಯ ಸ್ನೇಹಿತೆಯರೇನೂ ಆಗಿರಲಿಲ್ಲ. ಫೋನ್ ನಂಬರ್ ಇತ್ತಷ್ಟೇ. ಅದೊಂದು ದಿನ ಕಾಲೇಜಿನಲ್ಲಿ ನಾನು ತಲೆ ಸುತ್ತಿಬಿದ್ದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ. ಆರೋಗ್ಯ ತುಂಬಾ ಹದಗೆಟ್ಟಿತ್ತು. ವೈದ್ಯರು ನನ್ನ ಮನೆಯವರನ್ನು ಕರೆಸಬೇಕು ಎಂದರು. ಅಮ್ಮನಿಗೆ ಹುಷಾರು ಇಲ್ಲದ ಕಾರಣ ಹೇಳುವಂತಿರಲಿಲ್ಲ. ಮತ್ಯಾರೂ ಮನೆಯಲ್ಲಿ ಇರಲಿಲ್ಲ. ಆಗ ನೆನಪಾದವಳು ಸೃಷ್ಟಿ. ಕಾಲ್ ಮಾಡಿ ವಿಷಯ ಹೇಳಿದೆ. ಆಕೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದಳು. ಅಲ್ಲಿಂದ ತಮ್ಮ ಹಾಸ್ಟೇಲ್​ನಲ್ಲೇ ಇಟ್ಟುಕೊಂಡು ಉಪಚರಿಸಿದಳು. ಈಗ ನಮ್ಮ ಸ್ನೇಹ ನೋಡಿ ಬೇರೆಯವರು ಅಸೂಹೆ ಪಡುವಷ್ಟು ಆಗಿದೆ.

| ಚಿತ್ರಲೇಖಾ ಜೋಗುರ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net