Friendship Day 2023: ಕಡಿಮೆ ಬಜೆಟ್‌ನಲ್ಲಿ ಸ್ನೇಹಿತರೊಂದಿಗೆ ಸುತ್ತಾಡಲು ಭಾರತದಲ್ಲಿರುವ ಈ ಸ್ಥಳಗಳು ಬೆಸ್ಟ್

travel
Published on

ಬೆಂಗಳೂರು: 2023ರ ಸ್ನೇಹಿತರ ದಿನಾಚರಣೆ (ಫ್ರೆಂಡ್​​​ಶಿಪ್​​​​ ಡೇ) ಇನ್ನೇನು ಹತ್ತಿರದಲ್ಲಿದೆ. ಸ್ನೇಹಿತರ ದಿನವನ್ನು ವಿವಿಧ ದೇಶಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ, ಫ್ರೆಂಡ್​​​ಶಿಪ್​​​​ ಡೇ ಅನ್ನು ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಈ ವರ್ಷ ಸ್ನೇಹಿತರ ದಿನವನ್ನು ಆಗಸ್ಟ್ 6, 2023 ರಂದು ಆಚರಿಸಲಾಗುತ್ತದೆ. ಅಂದಹಾಗೆ ಈ ದಿನದಂದು ನಿಮ್ಮ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಬೇಕೆಂದು ಯೋಜಿಸುತ್ತಿದ್ದರೆ ಇಲ್ಲಿ ಬಜೆಟ್ ಸ್ನೇಹಿ ಸ್ಥಳಗಳ ಬಗ್ಗೆ ಮಾಹಿತಿ ಕೊಡಲಾಗಿದೆ ನೋಡಿ...

ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್


ಆಗಸ್ಟ್‌ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವ್ಯಾಲಿ ಆಫ್ ಫ್ಲವರ್ಸ್‌ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಉತ್ತರಾಖಂಡದಲ್ಲಿರುವ ಈ ರೋಮಾಂಚಕ ವ್ಯಾಲಿಯಲ್ಲಿ ಅಸಂಖ್ಯಾತ ವರ್ಣರಂಜಿತ ಹೂವುಗಳು ಅರಳುತ್ತವೆ. ಇದು ಮಾನ್ಸೂನ್ ವಿಹಾರಕ್ಕೆ ಸೂಕ್ತವಾದ ತಾಣವಾಗಿದೆ. ಕೈಗೆಟುಕುವ ವಸತಿ ಸೌಕರ್ಯಗಳು ಮತ್ತು ಟ್ರೆಕ್ಕಿಂಗ್ ಆಯ್ಕೆಗಳೂ ಇರುವುದರಿಂದ ಪ್ರಕೃತಿ ಪ್ರೇಮಿಗಳು ಭೇಟಿ ನೀಡಬಹುದು.

ಅಂದಾಜು ಬಜೆಟ್: ರೂ 5,000 – 8,000 ( ಪ್ರತಿ ವ್ಯಕ್ತಿಗೆ 3 ದಿನದ ಪ್ರವಾಸಕ್ಕೆ)
ಪ್ರವಾಸದ ಅವಧಿ: 3 ರಿಂದ 4 ದಿನಗಳು.

ತಲುಪುವುದು ಹೇಗೆ?
ವಿಮಾನದ ಮೂಲಕ : ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್ ಜೋಶಿಮಠದಿಂದ 16 ಕಿಮೀ ದೂರದಲ್ಲಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಜೋಶಿ ಮಠಕ್ಕೆ ಟ್ಯಾಕ್ಸಿ ಅಥವಾ ಬಸ್ ತೆಗೆದುಕೊಳ್ಳಿ.
ರೈಲಿನ ಮೂಲಕ: ಋಷಿಕೇಶ ರೈಲು ನಿಲ್ದಾಣವು ಅತ್ಯಂತ ಸಮೀಪದಲ್ಲಿದೆ. ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸಿನಲ್ಲಿ ಜೋಶಿಮಠಕ್ಕೆ ಹೋಗಬೇಕು.
ಬಸ್ ಮೂಲಕ: ಉತ್ತರಾಖಂಡ ಸಾರಿಗೆ ನಿಗಮ ಜೋಶಿಮಠಕ್ಕೆ ನಿಯಮಿತ ಬಸ್ಸುಗಳನ್ನು ಒದಗಿಸುತ್ತದೆ.

ಲೋನಾವಲಾ


ದಕ್ಷಿಣ ಭಾರತದಲ್ಲಿ ಪ್ರವಾಸ ಆಯೋಜಿಸುವವರು ಸ್ನೇಹಿತರೊಂದಿಗೆ ಮಹಾರಾಷ್ಟ್ರದ ಲೋನಾವಾಲಾಕ್ಕೆ ಹೋಗಿ. ಈ ಸುಂದರವಾದ ಗಿರಿಧಾಮವು ಮಾನ್ಸೂನ್ ಋತುವಿನಲ್ಲಿ ಸಮೃದ್ಧ ಹಸಿರು ಮತ್ತು ಬೆರಗುಗೊಳಿಸುವ ಜಲಪಾತಗಳೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ಬಜೆಟ್ ಸ್ನೇಹಿ ತಂಗುದಾಣಗಳೂ ಇಲ್ಲಿವೆ. ನೀವಿಲ್ಲಿ ಸ್ನೇಹಿತರೊಂದಿಗೆ ವಾಂಟೇಜ್ ಪಾಯಿಂಟ್‌ಗಳಿಗೆ ಟ್ರೆಕ್ ಮಾಡಿ, ಜತೆಗೆ ಸ್ಥಳೀಯ ಭಕ್ಷ್ಯಗಳನ್ನು ಆನಂದಿಸಲು ಮರೆಯದಿರಿ.
ಅಂದಾಜು ಬಜೆಟ್: ರೂ 3,000 – 5,000 (ಪ್ರತಿ ವ್ಯಕ್ತಿಗೆ 2 ದಿನದ ಪ್ರವಾಸಕ್ಕೆ)
ಪ್ರವಾಸದ ಅವಧಿ: 2 ರಿಂದ 3 ದಿನಗಳು.

ತಲುಪುವುದು ಹೇಗೆ?
ವಿಮಾನದ ಮೂಲಕ: ಪುಣೆ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ, ಟ್ಯಾಕ್ಸಿ ಬಾಡಿಗೆಗೆ ಪಡೆದು ಅಥವಾ ಲೋನಾವಾಲಾಕ್ಕೆ ಬಸ್​​ನಲ್ಲಿ ತೆರಳಬಹುದು.
ರೈಲಿನ ಮೂಲಕ: ಲೋನಾವಾಲಾ ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದೆ. ಇಲ್ಲಿಂದ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ.
ಬಸ್ ಮೂಲಕ: ಮಹಾರಾಷ್ಟ್ರ ರಾಜ್ಯದಲ್ಲಿ MSRTC (ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ) ಕಾರ್ಯನಿರ್ವಹಿಸುತ್ತದೆ. ಲೋನಾವಾಲವು ಮುಂಬೈ ಮತ್ತು ಪುಣೆಯಂತಹ ಮೆಟ್ರೋ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ವಾರಣಾಸಿ


ಕಡಿಮೆ ಬಜೆಟ್‌ನಲ್ಲಿ ಸ್ನೇಹಿತರೊಂದಿಗೆ ತೆರಳಬೇಕೆಂದರೆ ವಾರಣಾಸಿಗೆ ತೆರಳಿ. ಗಂಗಾನದಿಯ ದಡದಲ್ಲಿರುವ ಈ ಪ್ರಾಚೀನ ನಗರದಲ್ಲಿ ಸಂಸ್ಕೃತಿ ಮತ್ತು ಇತಿಹಾಸದ ವಿಶಿಷ್ಟ ಮಿಶ್ರಣವನ್ನು ನೋಡಬಹುದು. ಜತೆಗೆ ಗಂಗಾ ಆರತಿ ಹಾಗೂ ಕೈಗೆಟುಕುವ ಆಹಾರ ಸವಿಯಲು ಮರೆಯದಿರಿ.

ಅಂದಾಜು ಬಜೆಟ್: ರೂ. 4,000 – 6,000 (ಪ್ರತಿ ವ್ಯಕ್ತಿಗೆ 3 ದಿನದ ಪ್ರವಾಸಕ್ಕೆ)
ಪ್ರವಾಸದ ಅವಧಿ: 2 ರಿಂದ 3 ದಿನಗಳು.

ತಲುಪುವುದು ಹೇಗೆ?
ವಿಮಾನದ ಮೂಲಕ: ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲೇ ಇದೆ.
ರೈಲಿನ ಮೂಲಕ: ವಾರಣಾಸಿ ಜಂಕ್ಷನ್ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ.
ಬಸ್ ಮೂಲಕ: ವಾರಣಾಸಿಗೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (UPSRTC) ನಿಯಮಿತ ಬಸ್ಸುಗಳಿವೆ.

ರಿಷಿಕೇಶ


ರಿಷಿಕೇಶಕ್ಕೆ ಸ್ನೇಹಿತರೊಂದಿಗೆ ಸಾಹಸಮಯ ಪ್ರವಾಸವನ್ನು ಹಮ್ಮಿಕೊಳ್ಳಬಹುದು. ಹಿಮಾಲಯ ಮತ್ತು ಗಂಗಾ ನದಿಯಿಂದ ಆವೃತವಾಗಿರುವ ಈ ತಾಣದಲ್ಲಿ ರಿವರ್ ರಾಫ್ಟಿಂಗ್, ಬಂಗೀ ಜಂಪಿಂಗ್ ಮತ್ತು ಟ್ರೆಕ್ಕಿಂಗ್‌ನಂತಹ ರೋಮಾಂಚಕ ಚಟುವಟಿಕೆಗಳನ್ನು ಆನಂದಿಸಬಹುದು.

ಅಂದಾಜು ಬಜೆಟ್ :ರೂ 5,000 – 8,000 (ಪ್ರತಿ ವ್ಯಕ್ತಿಗೆ 3 ದಿನದ ಪ್ರವಾಸಕ್ಕೆ)
ಪ್ರವಾಸದ ಅವಧಿ: 2 ರಿಂದ 3 ದಿನಗಳು.
ತಲುಪುವುದು ಹೇಗೆ?
ವಿಮಾನದ ಮೂಲಕ: ಡೆಹ್ರಾಡೂನ್‌ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸಿನಲ್ಲಿ ರಿಷಿಕೇಶಕ್ಕೆ ಹೋಗಿ.
ರೈಲಿನ ಮೂಲಕ: ರಿಷಿಕೇಶವು ತನ್ನದೇ ರೈಲು ನಿಲ್ದಾಣವನ್ನು ಹೊಂದಿದ್ದು, ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ.
ಬಸ್ ಮೂಲಕ: UPSRTC ದೆಹಲಿ ಮತ್ತು ಇತರ ನಗರಗಳಿಂದ ಋಷಿಕೇಶಕ್ಕೆ ನಿಯಮಿತ ಬಸ್ಸುಗಳನ್ನು ನಡೆಸುತ್ತದೆ.

ಝನ್ಸ್ಕಾರ್


ಈ ಬಜೆಟ್‌ ಸ್ನೇಹಿ ಸ್ಥಳ ಉತ್ತರ ಭಾರತದಲ್ಲಿದೆ. ಮಾನ್ಸೂನ್ ಸಮಯದಲ್ಲಿ ನೀವಿಲ್ಲಿಗೆ ಭೇಟಿ ನೀಡಬಹುದು. ಇಲ್ಲಿನ ಭೂದೃಶ್ಯಗಳು, ಪ್ರಾಚೀನ ಮಠಗಳು ಮತ್ತು ಸಾಂಪ್ರದಾಯಿಕ ಲಡಾಖಿ ಸಂಸ್ಕೃತಿ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಅತ್ಯುತ್ತಮ ಹೋಂಸ್ಟೇಗಳು ಲಭ್ಯವಿದೆ.

ಅಂದಾಜು ಬಜೆಟ್: ರೂ 8000– 12,000 ಪ್ರತಿ ವ್ಯಕ್ತಿಗೆ 5-ದಿನದ ಪ್ರವಾಸಕ್ಕೆ.
ಪ್ರವಾಸದ ಅವಧಿ: 4 ರಿಂದ 5 ದಿನಗಳು.

ತಲುಪುವುದು ಹೇಗೆ?
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣವು ಲೇಹ್‌ನಲ್ಲಿದೆ. ಲೇಹ್‌ನಿಂದ, ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಳ್ಳಿ ಅಥವಾ ಝನ್ಸ್ಕರ್‌ಗೆ ಬಸ್‌ನಲ್ಲಿ ತೆರಳಿ.
ರಸ್ತೆಯ ಮೂಲಕ: ಝನ್ಸ್ಕರ್ ಅನ್ನು ಲೇಹ್ ನಿಂದ ರಸ್ತೆಯ ಮೂಲಕ ಪ್ರವೇಶಿಸಬಹುದು. ಅಲ್ಲದೆ ಮನಾಲಿಯಿಂದ ಲೇಹ್‌ಗೆ ನೇರವಾಗಿ ಬಸ್​​ಗಳಿವೆ.


ಗೋಕರ್ಣ


ಸ್ನೇಹಿತರೊಂದಿಗೆ ಬೀಚ್ ವಿಹಾರಕ್ಕಾಗಿ ಹುಡುಕುತ್ತಿರುವಿರಾ? ಹಾಗಾದರೆ ಅದಕ್ಕೆ ಉತ್ತರ, ಕರ್ನಾಟಕದ ಗೋಕರ್ಣ. ಪ್ರಾಚೀನ ಕಡಲತೀರಗಳು ಶಾಂತ ವಾತಾವರಣವನ್ನು ಆನಂದಿಸಲು ನೀವಿಲ್ಲಿಗೆ ತೆರಳಬಹುದು. ನೀವು ಬೀಚ್ ಕ್ಯಾಂಪಿಂಗ್ ಅನ್ನು ಸಹ ಪ್ರಯತ್ನಿಸಬಹುದು. ಜಲ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು.
ಅಂದಾಜು ಬಜೆಟ್: ರೂ. 4,000 – 6,000 ( ಪ್ರತಿ ವ್ಯಕ್ತಿಗೆ 3 ದಿನದ ಪ್ರವಾಸಕ್ಕೆ)
ಪ್ರವಾಸದ ಅವಧಿ: 2 ರಿಂದ 3 ದಿನಗಳು.
ತಲುಪುವುದು ಹೇಗೆ?
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣವು ಗೋವಾದಲ್ಲಿದೆ. ಗೋವಾದಿಂದ ಟ್ಯಾಕ್ಸಿ ಅಥವಾ ಬಸ್ಸಿನಲ್ಲಿ ಗೋಕರ್ಣಕ್ಕೆ ಹೋಗಿ.
ರೈಲಿನ ಮೂಲಕ: ಗೋಕರ್ಣ ರೈಲು ನಿಲ್ದಾಣವು ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
ಬಸ್ ಮೂಲಕ: ಕರ್ನಾಟಕ ರಾಜ್ಯದಲ್ಲಿ KSRTC (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಕಾರ್ಯನಿರ್ವಹಿಸುತ್ತವೆ ಗೋಕರ್ಣವು ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಮೆಟ್ರೋ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ಅನಂತಗಿರಿ ಹಿಲ್ಸ್


ಮಳೆಗಾಲದಲ್ಲಿ ಸ್ನೇಹಿತರೊಂದಿಗೆ ಅನಂತಗಿರಿ ಹಿಲ್ಸ್ ಹಚ್ಚ ಹಸಿರಿನಲ್ಲಿ ವಿಶ್ರಾಂತಿ ಪಡೆಯಿರಿ. ತೆಲಂಗಾಣದಲ್ಲಿರುವ ಈ ಸ್ಥಳವು ಬಜೆಟ್ ಸ್ನೇಹಿ ವಸತಿ ಆಯ್ಕೆಗಳನ್ನು ನೀಡುತ್ತದೆ. ದಟ್ಟವಾದ ಕಾಡುಗಳ ಮೂಲಕ ಚಾರಣ ಮಾಡಿ, ಜಲಪಾತಗಳಿಗೆ ಭೇಟಿ ನೀಡಿ ಮತ್ತು ಪ್ರಕೃತಿಯ ಮಡಿಲಲ್ಲಿ ತಂಪಾದ ವಾತಾವರಣವನ್ನು ಆನಂದಿಸಿ.
ಅಂದಾಜು ಬಜೆಟ್: ರೂ.3,000 – 5,000 (ಪ್ರತಿ ವ್ಯಕ್ತಿಗೆ 2 ದಿನದ ಪ್ರವಾಸಕ್ಕೆ)
ಪ್ರವಾಸದ ಅವಧಿ: 1 ರಿಂದ 2 ದಿನಗಳು.

ತಲುಪುವುದು ಹೇಗೆ?
ವಿಮಾನದ ಮೂಲಕ: ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದಲ್ಲಿದೆ. ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸಿನಲ್ಲಿ ಅನಂತಗಿರಿ ಬೆಟ್ಟಕ್ಕೆ ಹೋಗಬೇಕು.
ರೈಲುಮಾರ್ಗದ ಮೂಲಕ: ವಿಕಾರಾಬಾದ್ ರೈಲು ನಿಲ್ದಾಣವು ಹತ್ತಿರದಲ್ಲಿದೆ. ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸಿನಲ್ಲಿ ಅನಂತಗಿರಿ ಬೆಟ್ಟಕ್ಕೆ ಹೋಗಿ.
ಬಸ್ ಮೂಲಕ: ತೆಲಂಗಾಣ ರಾಜ್ಯದಲ್ಲಿ TSRTC (ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ) ನಿರ್ವಹಿಸುತ್ತವೆ. ಅನಂತಗಿರಿ ಬೆಟ್ಟಗಳು ಹೈದರಾಬಾದ್‌ಗೆ ಉತ್ತಮ ಸಂಪರ್ಕವನ್ನು ಹೊಂದಿದೆ .

(ನೀವು ಉತ್ತರ ಅಥವಾ ದಕ್ಷಿಣ ಭಾರತವನ್ನು ಅನ್ವೇಷಿಸುವಾಗ ಕಡಿಮೆ ಬಜೆಟ್‌ನಲ್ಲಿ ಸ್ನೇಹಿತರೊಂದಿಗೆ ಆಗಸ್ಟ್‌ನಲ್ಲಿ ಭೇಟಿ ನೀಡಲು ಈ ಮೇಲ್ಕಂಡ ಸ್ಥಳಗಳು ಅತ್ಯುತ್ತಮವಾಗಿದ್ದು, ಮರೆಯಲಾಗದ ಅನುಭವ ನೀಡುತ್ತವೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net