ಕಟ್ಟಡದ ಮೇಲೆ ಸಾಹಸ ಮಾಡುತ್ತಾ 68ನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಣ ಬಿಟ್ಟ

man dead
Published on

ಅಮೆರಿಕ: ಗಗನಚುಂಬಿ ಕಟ್ಟಡಗಳ ಮೇಲಿನ ಸಾಹಸಗಳಿಗೆ ಹೆಸರುವಾಸಿಯಾದ ಫ್ರೆಂಚ್ ಡೇರ್‌ಡೆವಿಲ್ ರೆಮಿ ಲುಸಿಡಿ ಹಾಂಗ್ ಕಾಂಗ್‌ನಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಕಳೆದ ಗುರುವಾರ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಂಜೆಯ 7.30ರ ವೇಳೆಗೆ ಕಟ್ಟಡ ಸಮೀಪ ಬಂದಿದ್ದ ರೆಮಿ ಲುಸಿಡಿ, ಅಲ್ಲಿನ ಭದ್ರತಾ ಸಿಬ್ಬಂದಿಗೆ 40ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನ ಭೇಟಿಗೆ ಬಂದಿದ್ದಾಗಿ ತಿಳಿಸಿದ್ದರು. 68ನೇ ಮಹಡಿಗೆ ಹೋಗಿ ಅಲ್ಲಿಂದ ಫೋಟೋ ತೆಗೆದುಕೊಳ್ಳುವ ಪ್ರಯತ್ನದಲ್ಲಿ ರೆಮಿ ಟಾಪ್‌ ಫ್ಲೋರ್‌ನ ಪೆಂಟ್‌ಹೌಸ್‌ಗೆ ಒಳಗೆ ಹೋಗುವ ಯತ್ನ ಮಾಡಿದ್ದಾರೆ. ಕಟ್ಟದ ಟಾಪ್‌ ಫ್ಲೋರ್‌ನಲ್ಲಿದ್ದ ಪೆಂಟ್‌ಹೌಸ್‌ ತನಕ ತಲುಪಿದ್ದ ರೆಮಿ ಲುಸಿಡಿ ಆಯ ತಪ್ಪಿದ್ದಾರೆ. ಅಲ್ಲಿನ ಕಿಟಕಿಯನ್ನು ಬಡಿದು ಮನೆಯ ಒಳಗಿನವರನ್ನು ಕರೆದಿದ್ದರು. ಆದರೆ, ಒಳಗಿನ ವ್ಯಕ್ತಿ ಹೊರಗೆ ಬಂದು ಸಹಾಯ ಮಾಡಲು ವೇಳೆಗಾಗಲೇ ರೆಮು ಲುಸಿಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಜಗತ್ತಿನ ಸಾಕಷ್ಟು ಗಗನಚುಂಬಿ ಕಟ್ಟಡಗಳನ್ನು ಏರಿದ ದಾಖಲೆ ಹೊಂದಿರುವ ರೆಮಿ ಲುಸಿಡಿ, ಕ್ರೇನ್‌ಗಳು, ವಿದ್ಯುತ್‌ ಟ್ರಾನ್ಸಮಿಟರ್‌ ಟವರ್‌ಗಳು, ರೇಡಿಯೋ ಟವರ್‌ಗಳನ್ನು ಏರಿದ ದಾಖಲೆ ಹೊಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ರೆಮಿ ಎಂಜಿಮಾ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದ್ದ ರೆಮಿ ಲುಸಿಡಿ.

ನೋಡಲು ಕೂಡ ಕಷ್ಟವಾಗುತ್ತಿದ್ದ ಕಟ್ಟಡಗಳನ್ನು ನೋಡನೋಡುತ್ತಿದ್ದಂತೆಯೇ ಸರಸರವಾಗಿ ಏರಿ ಅದರ ವಿಡಿಯೋಗಳು ಹಾಗೂ ಫೋಟೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ 30 ವರ್ಷದ ರೆಮಿ ಲುಸಿಡಿ ಪೋಸ್ಟ್‌ ಮಾಡುತ್ತಿದ್ದ. ತನ್ನ ಹೈ ರೈಸ್‌ ಕಟ್ಟಡಗಳ ಸ್ಟಂಟ್‌ಗಳ ಮೂಲಕವೇ ಹೆಸರುವಾಸಿಯಾಗಿದ್ದ ರೆಮಿ ಲುಸಿಡಿ, ಹಾಂಕಾಂಗ್‌ನಲ್ಲಿ ಅಂಥದ್ದೇ ಪ್ರಯತ್ನ ಮಾಡುವ ಯತ್ನದಲ್ಲಿ 68ನೇ ಮಹಡಿಯಿಂದ ಅಂದಾಜು 721 ಫೀಟ್‌ ಎತ್ತರಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಲುಸಿಡ್ ಕ್ಯಾಮೆರಾ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net