ಸಮಾಜಸೇವೆಯಿಂದ ಅಚ್ಚಳಿಯದ ಕಾರ್ಯ: ಪಾವನ ಅಭಿಮತ

New Project (10)
Published on

ಉಳ್ಳಾಲ: ಮಾರುತಿ ಯುವಕ ಮಂಡಲ ನಾಲ್ಕು ದಶಕಗಳಿಂದ ಸಮಾಜ ಸೇವೆ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಕಾರ್ಯ ನಡೆಸಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದೆ, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದುಕೊಳ್ಳಲಿ ಎಂದು ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಪಾವನಾ ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ, ಮೊಗವೀರಪಟ್ಣ ಮಾರುತಿ ಯುವಕ ಮಂಡಲದ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನವಜ್ಯೋತಿ ಚಾರಿಟೆಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ), ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೆಬಲ್ ಟ್ರಸ್ಟ್, ಸೆಂಚೂರಿ ಗ್ರೂಪ್ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮೊಗವೀರಪಟ್ಣ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಪ್ರಸಾದ್ ನೇತ್ರಲಾಯ ಡಾ.ವಿಷ್ಣು ಮಾತನಾಡಿದರು. ಮಾರುತಿ ಜನಸೇವಾ ಸಂಘದ ಅಧ್ಯಕ್ಷ ಸಂದೀಪ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಹಾಗೂ ಗುರಿಕಾರ ಸುರೇಂದ್ರ ಪುತ್ರನ್ ಉದ್ಘಾಟಿಸಿದರು. ಉಳ್ಳಾಲ ನಗರಸಭಾ ಅಧ್ಯಕ್ಷೆ ಕೆ.ಶಶಿಕಲಾ, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ವರದರಾಜ್ ಬಂಗೇರ ಉಳ್ಳಾಲ, ಮಾರುತಿ ಜನಸೇವಾ ಸಂಘದ ಪ್ರಧಾನ ಸಂಚಾಲಕ ಸುಧೀರ್ ವಿ.ಅಮೀನ್, ಚರಣ್ ಅನಿಲ್, ದಿನೇಶ್ ಕರ್ಕೇರ, ಮಹೇಶ್ ಸಾಲ್ಯಾನ್, ಕಿರಣ್, ಕಮಲಾಕ್ಷ, ವಾಸುದೇವ್, ಅಶ್ವಿನ್, ಸುಧೀರ್ ಸುವರ್ಣ, ತಿಲಕ್, ಪುನೀತ್, ಪ್ರಕಾಶ್, ವರುಣ್, ರಾಜ ಕೋಟ್ಯಾನ್, ಸುಧೀರ್ ಕೋಟ್ಯಾನ್, ಜನಾರ್ದನ, ಚೆನ್ನಪ್ಪ ಅಮೀನ್, ಮನೋಹರ, ರೂಪೇಶ್, ಮಾರುತಿ ಜನಸೇವಾ ಸಂಘ ಗೌರವಾಧ್ಯಕ್ಷ ವರದರಾಜ ಬಂಗೇರ ಉಪಸ್ಥಿತರಿದ್ದರು.

ಪ್ರಶಾಂತ್ ಬಿ.ಉಳ್ಳಾಲ ಸ್ವಾಗತಿಸಿದರು. ಕಪಿಲ್ ಎಸ್.ಬಂಗೇರ ನಿರೂಪಿಸಿದರು. ಶರ್ಮಿಳಾ ಬಂಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net