ಕೋಟೇಶ್ವರದಲ್ಲಿ ಉಚಿತ ಪುಸ್ತಕ ವಿತರಣೆ

kota
Published on

ಕೋಟ: ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಪ್ರೇಮಾ ಮತ್ತು ಮಂಜುನಾಥ ಶೆಟ್ಟಿಗಾರ್ ಮತ್ತು ಮಕ್ಕಳು, ಕೋಟೇಶ್ವರ ವಲಯದ 87 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆಯನ್ನು ಸಂಘದ ಅಧ್ಯಕ್ಷ ವಕ್ವಾಡಿ ಚಂದ್ರಶೇಖರ ಶೆಟ್ಟಿಗಾರರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ವಾಸ್ತುತಜ್ಞ ಡಾ.ಬಸವರಾಜ್ ಶೆಟ್ಟಿಗಾರ್, ಕಾರ್ಯದರ್ಶಿ ಸುರೇಶ್ ಶೆಟ್ಟಿಗಾರ್ ಇಂಜಿನಿಯರ್, ಸಮಾಜದ ಹಿರಿಯರಾದ ನಿವೃತ್ತ ಎ.ಎಸ್.ಐ ಗಣಪಯ್ಯ ಶೆಟ್ಟಿಗಾರ್, ಮಾಜಿ ಅಧ್ಯಕ್ಷರಾದ ವಕ್ವಾಡಿ ಜನಾರ್ದನ ಶೆಟ್ಟಿಗಾರ್, ಮಾಜಿ ಕೋಶಾಧಿಕಾರಿ ಕೃಷ್ಣಮೂರ್ತಿ ಶೆಟ್ಟಿಗಾರ್, ಗುರಿಕಾರರಾದ ಗೋಪಾಲ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ನಿವೃತ್ತಶಿಕ್ಷಕಿ ಇಂದಿರಾ ಗೋಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಷಾ ರವೀಂದ್ರ ಶೆಟ್ಟಿಗಾರ್ ಮಾತನಾಡಿದರು. ಸಂಘದ ಕಾರ್ಯದರ್ಶಿ ಪ್ರಮೋದ್ ಶೆಟ್ಟಿಗಾರ್ ವರದಿ ಮಂಡಿಸಿದರು. ಮಾಜಿ ಕಾರ್ಯದರ್ಶಿ ವೆಂಕಟೇಶ ಶೆಟ್ಟಿಗಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net